ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಕುಡಿತದ ಮತ್ತಿನಲ್ಲಿ ಹೆಂಡತಿಯನ್ನು ಹೊಡೆದು ಕೊಂದ ಪತಿ: ತಾಯಿಯ ಹತ್ಯೆ ಕಂಡು ಬೆಚ್ಚಿ ಅಜ್ಜಿ ಮನೆಗೆ ಓಡಿದ ಮಗ:

ಕುಡಿತದ ಮತ್ತಿನಲ್ಲಿ ಹೆಂಡತಿಯನ್ನು ಹೊಡೆದು ಕೊಂದ ಪತಿ: ತಾಯಿಯ ಹತ್ಯೆ ಕಂಡು ಬೆಚ್ಚಿ ಅಜ್ಜಿ ಮನೆಗೆ ಓಡಿದ ಮಗ:

 

 

ಮಂಗಳೂರು:  ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಪತ್ನಿಯೊಂದಿಗೆ ಜಗಳವಾಡಿ ಕೊಲೆಗೈದಿರುವ ಘಟನೆ ನಗರದ ತೆಂಕ ಎಕ್ಕಾರು ಗ್ರಾಮದಲ್ಲಿ ನಡೆದಿದೆ.

ದುರ್ಗೇಶ್ ಎಂಬಾತ ಕುಡಿದ ಮತ್ತಿನಲ್ಲಿ ತನ್ನ ಹೆಂಡತಿ ಸರಿತಾಳೊಂದಿಗೆ ಜಗಳವಾಡಿದ್ದಾನೆ. ಜಗಳ ತಾರಕಕ್ಕೇರಿ ಮರದ ರೀಪಿನಿಂದ ಹೊಡೆದು ಪತ್ನಿಯನ್ನು ಕೊಲೆ ಮಾಡಿದ್ದಾನೆ. ತಾಯಿಯ ಹತ್ಯೆ ಕಂಡು ಮಗ ರಾಹುಲ್ ಹೆದರಿ ತನ್ನ ಅಜ್ಜಿ ಮನೆಗೆ ಓಡಿ ಹೋಗಿದ್ದಾನೆ.ಸ್ವತಃ ಆರೋಪಿಯೇ ಇಂದು ಬೆಳಗ್ಗೆ ತನ್ನ ಅಣ್ಣ ಮಧುಗೆ ಕರೆ ಮಾಡಿ ಸರಿತಾ ಮೃತಪಟ್ಟಿರುವುದಾಗಿ ತಿಳಿಸಿದ್ದಾನೆ. ಮಧು ಸ್ಥಳಕ್ಕೆ ಬಂದು ನೋಡಿದಾಗ ದುರ್ಗೇಶನೇ ಸರಿತಾಳನ್ನು ಕೊಲೆ ಮಾಡಿರುವುದು ತಿಳಿದುಬಂದಿದೆ. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!