ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಪೆರೋಲ್ ಮೇಲೆ ತೆರಳಿ 15 ವರ್ಷ ತಲೆಮರೆಸಿಕೊಂಡಿದ್ದ ಆರೋಪಿ..!: ಮಡಿವಾಳ ಪೊಲೀಸರ ಕೈಗೆ ಸಿಕ್ಕಿಬಿದ್ದು, ಮತ್ತೆ ಜೈಲು ಪಾಲು..!: ಆರೋಪಿ ಸುಹೇಲ್ ಅಲಿಯಾಸ್ ಮೊಹಮ್ಮದ್ ಅಯಾಜ್ ಪತ್ತೆಗೆ ಖರ್ಚಾಗಿದ್ದು ಎಷ್ಟು ಗೊತ್ತೆ..?

ಪೆರೋಲ್ ಮೇಲೆ ತೆರಳಿ 15 ವರ್ಷ ತಲೆಮರೆಸಿಕೊಂಡಿದ್ದ ಆರೋಪಿ..!: ಮಡಿವಾಳ ಪೊಲೀಸರ ಕೈಗೆ ಸಿಕ್ಕಿಬಿದ್ದು, ಮತ್ತೆ ಜೈಲು ಪಾಲು..!: ಆರೋಪಿ ಸುಹೇಲ್ ಅಲಿಯಾಸ್ ಮೊಹಮ್ಮದ್ ಅಯಾಜ್ ಪತ್ತೆಗೆ ಖರ್ಚಾಗಿದ್ದು ಎಷ್ಟು ಗೊತ್ತೆ..?

ಬೆಳ್ತಂಗಡಿ: 2007 ರಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ ಪೆರೋಲ್ ಮೇಲೆ ತೆರಳಿದ್ದ ಅಸಾಮಿ, ಆರೋಪಿ ಸುಹೇಲ್ ಅಲಿಯಾಸ್ ಮೊಹಮ್ಮದ್ ಅಯಾಜ್ 15 ವರ್ಷಗಳ ಬಳಿಕ ಪತ್ತೆಯಾಗಿದ್ದಾನೆ. ಸದ್ಯ ಈತನನ್ನು ಮಡಿವಾಳ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಕೊಲೆ, ಕಳವು, ಸುಲಿಗೆ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈ ಖತರ್‌ನಾಕ್ 30 ದಿನ ಪೆರೋಲ್ ಮೇಲೆ ಬಂದು ಬಳಿಕ ತಲೆಮರೆಸಿಕೊಂಡಿದ್ದ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ತಲೆಮರೆಸಿಕೊಂಡಿದ್ದ ಸುಹೇಲ್ ತನ್ನ ಹೆಸರನ್ನು ಮಹಮ್ಮದ್ ಅಯಾಜ್ ಎಂದು ಬದಲಿಸಿಕೊಂಡು ಆಯುರ್ವೇದಿಕ್ ಮೆಡಿಸಿನ್ ಬಿಜಿನೆಸ್ ಮಾಡಿಕೊಂಡಿದ್ದ. ಈತನ ಪತ್ತೆಗೆ ಪೊಲೀಸರು ಖರ್ಚು ಬರೋಬ್ಬರಿ 10 ಲಕ್ಷ ರೂ ಹಣ ಖರ್ಚು ಮಡಿದ್ದಲ್ಲದೇ 15 ವರ್ಷಗಳ ಕಾಲ ಈತನಿಗಾಗಿ ಹುಡುಕಾಡಿದ್ದಾರೆ. ಸದ್ಯ  ಈತ ಬೆಳ್ತಂಗಡಿಯಲ್ಲಿ ಮಡಿವಾಳ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಮತ್ತೆ ಜೈಲು ಪಾಲಾಗಿದ್ದಾನೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!