ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ವಕೀಲ ಕುಲದೀಪ್ ಮೇಲೆ ಹಲ್ಲೆ ಆರೋಪ : ಪುಂಜಾಲಕಟ್ಟೆ ಠಾಣೆಯ ಎಸ್.ಐ ಸುತೇಶ್ ಎಸ್.ಪಿ. ಕಚೇರಿಗೆ ವರ್ಗಾವಣೆ.

ವಕೀಲ ಕುಲದೀಪ್ ಮೇಲೆ ಹಲ್ಲೆ ಆರೋಪ : ಪುಂಜಾಲಕಟ್ಟೆ ಠಾಣೆಯ ಎಸ್.ಐ ಸುತೇಶ್ ಎಸ್.ಪಿ. ಕಚೇರಿಗೆ ವರ್ಗಾವಣೆ.

 

 

 

 

ಬೆಳ್ತಂಗಡಿ : ಯುವ ವಕೀಲ ಕುಲದೀಪ್ ಶೆಟ್ಟಿ  ಮೇಲೆ ಹಲ್ಲೆ ಆರೋಪದಲ್ಲಿ ಪುಂಜಾಲಕಟ್ಟೆ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸುತೇಶ್ ರವರನ್ನು  ಎಸ್.ಪಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.

ಪುಂಜಾಲಕಟ್ಟೆ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸುತೇಶ್  ಮತ್ತು ಸಿಬ್ಬಂದಿಗಳು ಜಾಗದ ವಿಚಾರವೊಂದರ ಪ್ರಕರಣದಲ್ಲಿ ವಕೀಲ ಕುಲದೀಪ್ ಶೆಟ್ಟಿ  ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿತ್ತು. ಈ ಬಗ್ಗೆ ಅವರ ಮೇಲೆ ಕ್ರಮಕೈಗೊಳ್ಳುವಂತೆ ವಕೀಲರ ಸಂಘಗಳಿಂದ ಪ್ರತಿಭಟನೆ ಕೂಡ ನಡೆಸಲಾಗಿತ್ತು ಎಂದು ತಿಳಿದು ಬಂದಿದೆ.

ಪ್ರಕರಣದ ಬಗ್ಗೆ ಎಸ್ ಪಿ   ನೇತೃತ್ವದಲ್ಲಿ ಪುತ್ತೂರು ಡಿವೈಎಸ್ಪಿ  ಆಂತರಿಕ ತನಿಖೆ ಮಾಡಿದ್ದರು ಇದರ ವರದಿ ಬೆನ್ನಲ್ಲೆ ಪುಂಜಾಲಕಟ್ಟೆ ಠಾಣೆಯ ಪೊಲೀಸ್ ಸಬ್ ಇನ್ಸೆಕ್ಟರ್ ಸುತೇಶ್ ರನ್ನು ನೇರವಾಗಿ ಎಸ್.ಪಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ಇನ್ನು ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪಿಎಸ್ಐ ಅಗಿ ಯಾರನ್ನು ನೇಮಕ ಮಾಡಿಲ್ಲ ಪ್ರಭಾರವಾಗಿ ಬೆಳ್ತಂಗಡಿ ಪೊಲೀಸ್ ಠಾಣೆಯ ಪಿಎಸ್ಐ ನಂದಕುಮಾರ್ ಅವರಿಗೆ ತಾತ್ಕಾಲಿಕವಾಗಿ ಜಾರ್ಜ್ ನೀಡಲಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!