ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ವಿಜಯನಗರ ಜಿಲ್ಲೆ ಅದರ ರಾಜಧಾನಿ : ಸಚಿವ ಆನಂದ್​ ಸಿಂಗ್​​:

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ವಿಜಯನಗರ ಜಿಲ್ಲೆ ಅದರ ರಾಜಧಾನಿ : ಸಚಿವ ಆನಂದ್​ ಸಿಂಗ್​​:

 

 

ಬೆಂಗಳೂರು :  ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ವಿಜಯನಗರ ಜಿಲ್ಲೆ ರಾಜಧಾನಿಯಾಗುವ ಸಾಧ್ಯತೆ ಇದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಮತ್ತೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ನಗರದ ಹೊರವಲಯದ ಭಟ್ರಳ್ಳಿ ಆಂಜನೇಯ ದೇಗುಲದ ಮೈದಾನದ ಬಳಿ ಬಿಜೆಪಿ ಜಿಲ್ಲಾ ಭವನ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿಜಯನಗರ ನೆಲದ ಗುಣವೇ ವಿಶೇಷವಾಗಿದೆ. ಗತವೈಭವ ಸಾರಿದ ನಾಡು ಇದು. ಇಲ್ಲಿ ಕೈಗೊಂಡ ತೀರ್ಮಾನಗಳು, ಯಾವುದೇ ಯೋಜನೆಗಳು ತಪ್ಪಿದ ಇತಿಹಾಸವೇ ಇಲ್ಲ. ಆದ್ದರಿಂದ ಉತ್ತರ ಕರ್ನಾಟಕ ರಾಜ್ಯವಾದರೆ ನೂತನ ವಿಜಯನಗರ ಜಿಲ್ಲೆ ರಾಜಧಾನಿಯಾಗುವ ಸಾಧ್ಯತೆ ಇದೆ ಎಂದರು.ವಿಜಯನಗರ ಜಿಲ್ಲಾ ಕೇಂದ್ರದಲ್ಲಿ ಅರ್ಧ ಎಕರೆ ಪ್ರದೇಶದಲ್ಲಿ ಬಿಜೆಪಿ ಜಿಲ್ಲಾ ಕಚೇರಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕಾಮಗಾರಿ ನಿಮಿತ್ತ ಕಚೇರಿ ಜಾಗದಲ್ಲಿ ಬೆಳಗಿನಿಂದ ವಿಶೇಷವಾಗಿ ಹೋಮ ಹವನಗಳನ್ನು ನಡೆಸಲಾಯಿತು. ಈ ಸಂದರ್ಭ ನಗರಸಭೆ ಅಧ್ಯಕ್ಷೆ ಸುಂಕಮ್ಮ, ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಮುಖಂಡರಾದ ಅಶೋಕ್ ಜೀರೆ, ಸಾಲಿ ಸಿದ್ದಯ್ಯ, ದಿನಾ ಮಂಜುನಾಥ್, ಕವಿತಾ ಈಶ್ವರ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!