ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷರಾಗಿ ಜೆಸಿ ಹೆಚ್.ಜಿ.ಎಫ್. ಶಂಕರ್ ರಾವ್ ಅಧಿಕಾರ ಸ್ವೀಕಾರ

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷರಾಗಿ ಜೆಸಿ ಹೆಚ್.ಜಿ.ಎಫ್. ಶಂಕರ್ ರಾವ್ ಅಧಿಕಾರ ಸ್ವೀಕಾರ

 

ಬೆಳ್ತಂಗಡಿ:  ಜೆಸಿಐ ಬೆಳ್ತಂಗಡಿ ಮಂಜುಶ್ರೀಯ 46ನೇ ಅಧ್ಯಕ್ಷರಾಗಿ ವಾಣಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಜೆಸಿ ಹೆಚ್.ಜಿ.ಎಫ್. ಶಂಕರ್ ರಾವ್ ಅಧಿಕಾರ ಸ್ವೀಕರಿಸಿದರು. ನಿರ್ಗಮನ ಅಧ್ಯಕ್ಷರಾದ ಜೆ.ಎಫ್.ಎಂ. ಪ್ರಸಾದ್ ಬಿ.ಎಸ್. ಅವರು ಪದಪ್ರಧಾನವನ್ನು ಜೆಸಿ ಭವನದಲ್ಲಿ ಡಿ.22ರಂದು ನಡೆಸಿದರು. ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪಿ. ಕುಶಾಲಪ್ಪ ಗೌಡ ಮಾತನಾಡಿ, ನಿರಂತರ ಪ್ರಯತ್ನ ಮತ್ತು ಕ್ರಿಯಾಶೀಲತೆಯಿಂದ ಉನ್ನತ ವ್ಯಕ್ತಿತ್ವವನ್ನು ಸಂಪಾದಿಸಬಹುದು. ಜೆಸಿಐನಿಂದ ತರಬೇತಿ ಪಡೆದವರು ಸಮಾಜಮುಖಿಯಾಗಿ ಬೆಳೆದು ಶ್ರೇಷ್ಠ ಸ್ಥಾನಮಾನವನ್ನು ಪಡೆಯಲು ಸಾಧ್ಯ ಎಂದರು. ಘಟಕದ ಪೂರ್ವಧ್ಯಕ್ಷರಾದ JC ಸಂತೋಷ ಕೋಟ್ಯಾನ್, ಘಟಕದ ನಿಕಟ ಪೂರ್ವ ಅಧ್ಯಕ್ಷರಾದ JFM ಸ್ವರೂಪ್ ಶೇಖರ್ ಅವರನ್ನು ಪೂರ್ವಧ್ಯಕ್ಷರ ಸಾಲಿಗೆ ಸೇರ್ಪಡೆ ಗೊಳಿಸಿದರು. ಜೆಸಿಐ ಭಾರತದ ವಲಯ XV ರ ವಲಯಧ್ಯಕ್ಷರಾದ JFD ಪುರುಷೋತ್ತಮ್ ಶೆಟ್ಟಿ ಮುಖ್ಯ ಅತಿಥಿಯಾಗಿ, ವಲಯ ಉಪಾಧ್ಯಕ್ಷರಾದ JC ಭರತ್ ಶೆಟ್ಟಿ ಮತ್ತು ವಲಯಡಿಳಿತ ಮಂಡಳಿಯ ನಿರ್ದೇಶಕ JC ಪ್ರಶಾಂತ್ ಲಾಯಿಲ ಉಪಸ್ಥಿತರಿದ್ದರು. ಘಟಕದ ಪೂರ್ವಧ್ಯಕ್ಷರಾದ Jc ಶ್ರೀನಾಥ್ ಕೆ.ಎಮ್, ಘಟಕ ಉಪಾಧ್ಯಕ್ಷರಾದ Jc HGF ರಂಜಿತ್ ಎಚ್. ಡಿ., Jc HGF ಪ್ರೀತಮ್ ಶೆಟ್ಟಿ ಮತ್ತು ಸದಸ್ಯರಾದ ರಕ್ಷಿತ್ ಅಂಡಿಜೆ ಮಖ್ಯ ಅತಿಥಿಗಳನ್ನು ಪರಿಚಯಿಸಿದರು. Jc ಚಂದ್ರಹಾಸ್ ಬಳಂಜ ನೂತನ ಅಧ್ಯಕ್ಷರನ್ನು ಸಭೆಗೆ ಪರಿಚಯಿಸಿದರು. ಮಹಿಳಾ ವಿಭಾಗದ ಸಂಯೋಜಕಿ Jc ಮಾಮಿತಾ ಸುಧೀರ್ ಹಾಗೂ ಜೂನಿಯರ್ jc ವಿಭಾಗದ ಅಧ್ಯಕ್ಷರಾದ JJc ರಾಮಕೃಷ್ಣ ಶರ್ಮಾ ಅಧಿಕಾರ ಸ್ವೀಕರಿಸಿದರು. ಪೂರ್ವಧ್ಯಕ್ಷರಾದ Jc ಚಿದಾನಂದ ಇಡ್ಯಾ ಗಣ್ಯರನ್ನು ಬರಮಾಡಿಕೊಂಡರು ನೂತನ ಕಾರ್ಯದರ್ಶಿ Jc ಸುಧೀರ್ ಕೆ. ಎನ್ ಸರ್ವರಿಗೂ ಧನ್ಯವಾದ ಸಮರ್ಪಿಸಿದರು. ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಪೂರ್ವಧ್ಯಕ್ಷರು, ಸದಸ್ಯರು ಮತ್ತು ಜೆಸಿಐನ ಹಿತೈಷಿಗಳು ನೂತನ ತಂಡಕ್ಕೆ ಶುಭ ಹಾರೈಸಿದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!