ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಸುಳ್ಯ ತಾಲೂಕಿನಲ್ಲಿ ಮತ್ತೆ ಭೂಕಂಪದ ಅನುಭವ: ಎರಡು ತಿಂಗಳ ನಂತರ ಭಯಭೀತರಾದ ಜನ: ಭಾರೀ ಶಬ್ದದೊಂದಿಗೆ ನಡುಗಿದ ಭೂಮಿ..!

ಸುಳ್ಯ ತಾಲೂಕಿನಲ್ಲಿ ಮತ್ತೆ ಭೂಕಂಪದ ಅನುಭವ: ಎರಡು ತಿಂಗಳ ನಂತರ ಭಯಭೀತರಾದ ಜನ: ಭಾರೀ ಶಬ್ದದೊಂದಿಗೆ ನಡುಗಿದ ಭೂಮಿ..!

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಮತ್ತೆ ಲಘು ಭೂಕಂಪನದ ಅನುಭವವಾಗಿದೆ. ಕಳೆದ ಕೆಲವು ತಿಂಗಳ ಹಿಂದೆ ಸರಣಿ ಭೂಕಂಪನದ ಹೊಡೆತಕ್ಕೆ ಸಿಲುಕಿ ಬಳಿಕ ಶಾಂತವಾಗಿದ್ದ ಸುಳ್ಯ ತಾಲೂಕಿನಲ್ಲಿ ಮತ್ತೆ ನಿನ್ನೆ ಸಂಜೆ ಭೂಕಂಪನದ ಅನುಭವವಾಗಿದೆ. ಮಡಪ್ಪಾಡಿಯಲ್ಲಿ ಸಂಜೆ ಸುಮಾರು 7:32ರ ಹೊತ್ತಿಗೆ ಭುವಿಯೊಡಲು ಕಂಪಿಸಿದ ಅನುಭವವಾಗಿದ್ದು, ಮಡಪ್ಪಾಡಿ ಗ್ರಾಮದ ಕಡ್ಯ, ಹಾಡಿಕಲ್ಲು ಗ್ರಾಮದಲ್ಲಿ ಭಾರಿ ಶಬ್ದದೊಂದಿಗೆ ಭೂಮಿ ನಡುಗಿದಂತಾಯಿತು ಎಂದು ಜನರು ಹೇಳಿದ್ದಾರೆ. ಈ ಘಟನೆ ಜನರಲ್ಲಿ ಆತಂಕ ಮೂಡಿಸಿದೆ. ಆದರೆ ನಿನ್ನೆಯ ಘಟನೆಯ ಬಗ್ಗೆ ಭೂವಿಜ್ಞಾನ ಅಧಿಕಾರಿಗಳಿಂದ ಯಾವುದೇ ಅಧಿಕೃತ ಮಾಹಿತಿ ದೊರೆತಿಲ್ಲ.

 

 

ಕೆಲವು ತಿಂಗಳುಗಳ ಹಿಂದೆ ಇಲ್ಲಿನ ಸಂಪಾಜೆ, ಚೆಂಬು, ಕರಿಕೆ, ಅರಂತೋಡು, ತೊಡಿಕಾನ, ಪೆರಾಜೆ, ಗೂನಡ್ಕ ಸೇರಿದಂತೆ ಹಲವೆಡೆಗಳಲ್ಲೂ ಸರಣಿ ಭೂಕಂಪನವಾಗಿತ್ತು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!