ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬೆಳಾಲು ಬಾವಿಗೆ ಬಿದ್ದ ಕಡವೆ, ರಕ್ಷಿಸಿ ಕಾಡಿಗೆ ಬಿಟ್ಟ ಇಲಾಖೆ..!:

ಬೆಳಾಲು ಬಾವಿಗೆ ಬಿದ್ದ ಕಡವೆ, ರಕ್ಷಿಸಿ ಕಾಡಿಗೆ ಬಿಟ್ಟ ಇಲಾಖೆ..!:

 

 

ಬೆಳ್ತಂಗಡಿ:  ಬೆಳಾಲು ಸಮೀಪದ ಹಳೆಮಾಯ ಎಂಬಲ್ಲಿ‌ ಕಡವೆಯೊಂದು ಬಾವಿಗೆ ಬಿದ್ದಿರುವ ಘಟನೆ ಡಿ 24 ರಂದು ನಡೆದಿದೆ. ಹಳೆಮಾಯಾ ಬಳಿಯ ಸೋಮು‌ ಎಂಬವರ ಬಾವಿಗೆ ಕಡವೆಯೊಂದು ಬಿದಿದ್ದು ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು. ಉಪ್ಪಿನಂಗಡಿ ಆರ್.ಎಫ್ ಓ ಜಯಪ್ರಕಾಶ್, ಅವರ ಮಾರ್ಗದರ್ಶನದಲ್ಲಿ‌ ದಡಂತಮಲೆ‌ ಶಾಖೆಯ ಡಿ. ಆರ್. ಎಫ್ ಒ ಲೋಕೇಶ್ ,ಗಸ್ತು ಅರಣ್ಯ ರಕ್ಷಕ ವಿನಯ್ ಚಂದ್ರ ಇವರು ಸುಮಾರು 3 ವರ್ಷ ಪ್ರಾಯದ ಕಡವೆಯನ್ನು ಮೇಲೆತ್ತಿ ಪ್ರಥಮ ಚಿಕಿತ್ಸೆ ನೀಡಿ ಕಾಡಿಗೆ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳೀಯರು ವಿಪತ್ತು ನಿರ್ವಹಣಾ ತಂಡಕ್ಕೆ ತಿಳಿಸಿದ್ದು ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೆನ್ನಲಾಗಿದೆ. ನಂತರ ಜೆಸಿಬಿ ಮೂಲಕ ಕಡವೆಯನ್ನು ರಕ್ಷಿಸುವ  ಕಾರ್ಯ ಮಾಡಲಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!