ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ನಡ ಗ್ರಾಮದ ಕೇಳ್ತಾಜೆ ಸಮೀಪ ಮಹಿಳೆಯ ಮೃತದೇಹ‌ ಪತ್ತೆ...? : ಸುಟ್ಟ‌ ರೀತಿಯಲ್ಲಿ ಪತ್ತೆಯಾದ ಅಪರಿಚಿತ ಮೃತದೇಹ..! ಬೆಳ್ತಂಗಡಿ ಪೊಲೀಸರಿಂದ ಪರಿಶೀಲನೆ

ನಡ ಗ್ರಾಮದ ಕೇಳ್ತಾಜೆ ಸಮೀಪ ಮಹಿಳೆಯ ಮೃತದೇಹ‌ ಪತ್ತೆ...? : ಸುಟ್ಟ‌ ರೀತಿಯಲ್ಲಿ ಪತ್ತೆಯಾದ ಅಪರಿಚಿತ ಮೃತದೇಹ..! ಬೆಳ್ತಂಗಡಿ ಪೊಲೀಸರಿಂದ ಪರಿಶೀಲನೆ

 

 

 

ಬೆಳ್ತಂಗಡಿ : ನಡ ಗ್ರಾಮದ ಕೇಳ್ತಾಜೆ ಬಳಿ ಅಪರಿಚಿತ  ಶವವೊಂದು ಸುಟ್ಟ ರೀತಿಯಲ್ಲಿ‌ ಕಂಡು ಬಂದಿದೆ.

ನಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನ್ಯಾಡಿ 1 ಸಮೀಪದ ಸೊರಕ್ಕೆ ಎಂಬಲ್ಲಿ ರಬ್ಬರ್ ತೋಟದ ಚರಂಡಿಯಲ್ಲಿ ಅರೆ ಸುಟ್ಟ ಸ್ಥಿತಿಯಲ್ಲಿ ಅಪರಿಚಿತ  ಶವವೊಂದು ಪತ್ತೆಯಾಗಿದೆ. ಸಮೀಪದ ಮನೆಯವರು ಸಂಜೆ  ಮೇಯಲು ಕಟ್ಟಿದ  ದನವನ್ನು ತರಲೆಂದು ಹೋದ ಸಂದರ್ಭ  ಕೊಳೆತ ವಾಸನೆ  ಬರುತಿದ್ದು ಈ ಬಗ್ಗೆ  ಹೋಗಿ ನೋಡಿದಾಗ ಖಾಸಗಿ ವ್ಯಕ್ತಿಗಳಿಬ್ಬರ  ಜಾಗದ ಗಡಿ ಗುರುತಿನ ಅಗಳಿನಲ್ಲಿ   ನೊಣಗಳು ಹಾರಡುವುದನ್ನು ಗಮನಿಸಿ ಸ್ಥಳೀಯ ಪಂಚಾಯತ್ ಸದಸ್ಯರಿಗೆ ಹಾಗೂ ಅಧ್ಯಕ್ಷ ವಿಜಯಗೌಡ ಅವರಿಗೆ ಮಾಹಿತಿ ನೀಡಿದ್ದಾರೆ. ಅವರು ನೋಡಿದಾಗ ಮೃತ ದೇಹವೊಂದು   ಕಟ್ಟಿಗೆ ರಾಶಿಯ‌ ಅಡಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಕಂಡುಬಂದಿದೆ.ತಕ್ಷಣ ಬೆಳ್ತಂಗಡಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ  ಬೆಳ್ತಂಗಡಿ ಸಬ್ ಇನ್ಸ್ ಪೆಕ್ಟರ್ ನಂದಕುಮಾರ್, ಎಎಸ್ಐ ತಿಲಕ್ ರಾಜ್, ಸಿಬ್ಬಂದಿಗಳಾದ  ಲಾರೆನ್ಸ್ , ವಿಶ್ವನಾಥ್,ನಾಗರಾಜ್,ಧರ್ಮಪಾಲ್, ಸತೀಶ್,ಅವರನ್ನೊಳಗೊಂಡ    ಪೊಲೀಸರ ತಂಡ ಸ್ಥಳದಲ್ಲಿದ್ದು  ಪರಿಶೀಲನೆ ನಡೆಸುತಿದ್ದಾರೆ.ಮೇಲ್ನೊಟ್ಟಕ್ಕೆ   ಕಾಲುಂಗುರ ಕಂಡುಬರುತಿದ್ದು ಮಹಿಳೆಯ ಶವವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು ಸುಮಾರು ಒಂದು ವಾರಗಳ ಹಿಂದೆ ಈ ಘಟನೆ ನಡೆದಿರಬಹುದು ಎಂದು ಸಂಶಯಿಸಲಾಗಿದೆ.  ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!