ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಗೇರುಕಟ್ಟೆ ,10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ..! ನೇಣು ಬಿಗಿದ ರೀತಿಯಲ್ಲಿ ಶೌಚಾಲಯದಲ್ಲಿ ಪತ್ತೆ..!

ಗೇರುಕಟ್ಟೆ ,10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ..! ನೇಣು ಬಿಗಿದ ರೀತಿಯಲ್ಲಿ ಶೌಚಾಲಯದಲ್ಲಿ ಪತ್ತೆ..!

 

 

ಬೆಳ್ತಂಗಡಿ : ಶಾಲೆಯ ಪಕ್ಕದ ಪ್ಲ್ಯಾಟ್ ನ ಶೌಚಾಲಯಕ್ಕೆ ಹೋದ ಶಾಲಾ ವಿದ್ಯಾರ್ಥಿನಿಯೊಬ್ಬಳು ನೇಣುಬಿಗಿದ ರೀತಿಯಲ್ಲಿ ಪತ್ತೆಯಾದ ಘಟನೆ ಬೆಳ್ತಂಗಡಿಯ ಗೇರುಕಟ್ಟೆಯಲ್ಲಿ ಬೆಳಕಿಗೆ ಬಂದಿದೆ.

ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆಯಲ್ಲಿರುವ ಮನ್ಸಾರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಇಂದು ಶಾಲಾ ಸಮೀಪದ ಪ್ಲ್ಯಾಟ್ ಗೆ ಹೋಗಿ ಮಹಿಳೆಯೊಬ್ಬರಲ್ಲಿ ನನಗೆ ಶೌಚಾಲಯಕ್ಕೆ ಹೋಗಬೇಕು ಅಂತ ಕೇಳಿಕೊಂಡು ಹೋಗಿದ್ದಳು ಅದರೆ ತುಂಬಾ ಹೊತ್ತಾದರೂ ಹುಡುಗಿ ಬಾರದೇ ಇದ್ದಾಗ ಅನುಮಾನಗೊಂಡು ಮನೆಯ ಮಹಿಳೆ ಬಾಗಿಲು ಬಡಿದಿದ್ದಾರೆ ಅದರೆ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಮಹಿಳೆ ಸ್ಥಳೀಯರಿಗೆ ಬೊಬ್ಬೆ ಹಾಕಿ ಮಾಹಿತಿ ನೀಡಿದ್ದಾರೆ ತಕ್ಷಣ ಸ್ಥಳೀಯರು ಬಂದು ಬಾಗಿಲು ಮುರಿದಾಗ ವಿದ್ಯಾರ್ಥಿನಿಯು ಬುರ್ಖಾ ವೆಲ್ ನಿಂದ ಟ್ಯಾಪ್ ಗೆ ನೇಣುಬಿಗಿದುಕೊಂಡ ರೀತಿಯಲ್ಲಿ ಪತ್ತೆಯಾಗಿದ್ದಾಳೆ ತಕ್ಷಣ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ಸಾಗಿಸಿದಾಗ ಮೃತಪಟ್ಟಿದ್ದಳು.

ಹತ್ತನೇ ತರಗತಿ ಕಲಿಯುತಿದ್ದ   ಕುಪ್ಪೆಟ್ಟಿಯ ಉದ್ಯಮಿಯೊಬ್ಬರ ಪುತ್ರಿ     ಎಂದು ಗುರುತಿಸಲಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಮೇಲ್ನೊಟ್ಟಕ್ಕೆ ಆತ್ಮಹತ್ಯೆ ರೀತಿ ಕಂಡು ಬಂದಿದ್ದು ಪೊಲೀಸ್  ತನಿಖೆಯಿಂದ ಹೆಚ್ಚಿನ ಮಾಹಿತಿ ಸಿಗಬೇಕಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!