ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬೆಳ್ತಂಗಡಿ ಮಾಲಾಡಿ ಬಳಿ   ಸೇತುವೆಗೆ ರಿಕ್ಷಾ ಡಿಕ್ಕಿ: ಒಂದು ವರ್ಷದ ಮಗು ಸಾವು:ಇತರರಿಗೆ ಸಣ್ಣಪುಟ್ಟ ಗಾಯ:

ಬೆಳ್ತಂಗಡಿ ಮಾಲಾಡಿ ಬಳಿ   ಸೇತುವೆಗೆ ರಿಕ್ಷಾ ಡಿಕ್ಕಿ: ಒಂದು ವರ್ಷದ ಮಗು ಸಾವು:ಇತರರಿಗೆ ಸಣ್ಣಪುಟ್ಟ ಗಾಯ:

 

 

 

 

 

ಬೆಳ್ತಂಗಡಿ : ಆಟೋ ರಿಕ್ಷಾವೊಂದು ಸೇತುವೆ ಡಿಕ್ಕಿ ಹೊಡೆದ ಪರಿಣಾಮ ಆಟೋ ರಿಕ್ಷಾದಲ್ಲಿದ್ದ ಒಂದು ವರ್ಷದ  ಮಗು ಸಾವನ್ನಪ್ಪಿದ ಘಟನೆ ಬೆಳ್ತಂಗಡಿಯ ಮಾಲಾಡಿಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಬನಂತಾಡಿ ಸಮೀಪ ಆಟೋ ರಿಕ್ಷಾವೊಂದು ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಕಾರ್ಕಳ ತಾಲೂಕಿನ ನಿಟ್ಟೆ ನಿವಾಸಿಯಾದ ಸಂತೋಷ್ ಮತ್ತು ಗೀತಾ ದಂಪತಿಗಳ ಒಂದು ವರ್ಷ ಪ್ರಾಯದ  ಗಂಡು ಮಗು ಸಾವನ್ನಪ್ಪಿದ್ದು ರಿಕ್ಷಾಲ್ಲಿದ್ದ ಇತರರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಸಾವನ್ನಪ್ಪಿದ ಮಗುವಿನ ತಾಯಿ ಗೀತಾ ತನ್ನ ತಾಯಿ ಮನೆ ಬೆಳ್ತಂಗಡಿ ತಾಲೂಕಿನ ಪಡಂಗಡಿ ಬಂದಿದ್ದು ಜ.30 ರಂದು ಗೀತಾ ಅವರ ತಂಗಿ ಮನೆಯಾದ ಶಂಬೂರು ಎಂಬಲ್ಲಿಗೆ ಹೋಗಿ ವಾಪಾಸ್ ತಾಯಿ ಜೊತೆ ಮನೆಗೆ ಆಟೋ ರಿಕ್ಷಾದಲ್ಲಿ  ಪಡಂಗಡಿಗೆ ಹಿಂದಿರುಗಿ  ಬರುತ್ತಿದ್ದಾಗ ರಿಕ್ಷಾ  ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಮಗು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದು ತಕ್ಷಣ ಮಂಗಳೂರು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಿಸದೆ ಸಂಜೆ ಮಗು ಸಾವನ್ನಪ್ಪಿದೆ. ಆಟೋ ಚಾಲಕನ ನಿರ್ಲಕ್ಷ್ಯತನದ ಚಾಲನೆಯಿಂದ ಮಗು ಸಾವಿಗೆ ಕಾರಣವಾಗಿರುವ ಬಗ್ಗೆ ಆಟೋ ಚಾಲಕ ಶಂಬೂರಿನ ದಯಾನಂದ ವಿರುದ್ಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!