Home › ‘ನಾಳದಪ್ಪೆ ಭಕ್ತಿ ಸುಗಿಪು' ಆಲ್ಬಂ ಹಾಡು ಬಿಡುಗಡೆ
‘ನಾಳದಪ್ಪೆ ಭಕ್ತಿ ಸುಗಿಪು' ಆಲ್ಬಂ ಹಾಡು ಬಿಡುಗಡೆ
ONLINE PUDU / Tuesday, January 31, 2023
ನಾಳ: ಚಿರಂಜವಿ ಶೆಟ್ಟಿ ನಿರ್ಮಾಣದ ‘ನಾಳದಪ್ಪೆ ಭಕ್ತಿ ಸುಗಿಪು’ ಭಕ್ತಿ ಗೀತೆಗಳ ಆಲ್ಬಂ ಜಾತ್ರೋತ್ಸವ ಸಂದರ್ಭದಲ್ಲಿ ಬಿಡುಗಡೆಗೊಂಡಿದ್ದು, ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭುವನೇಶ್ ಗೇರುಕಟ್ಟೆ ಬಿಡುಗಡೆ ಮಾಡಿದರು.
ಗಣೇಶ್ ಬಿ.ನಾಳ ಸಾಹಿತ್ಯವಿರುವ ಈ ಭಕ್ತಿಗೀತೆಗೆ ಜಯಶ್ರೀ ಬೆಳ್ತಂಗಡಿ ಧ್ವನಿ ನೀಡಿದ್ದು, ಶ್ರೇಯ ತೆಕ್ಕಾರು ಅಭಿನಯಿಸಿದ್ದಾರೆ. ಅವಿನಾಶ್. ಎ. ಪುರುಷೋತ್ತಮ ಇಡ್ಯ ಕೈಚಳಕದಲ್ಲಿ ಛಾಯಾಗ್ರಹಣವಿದ್ದು, ಅನಿಶ್ ನಾಯಕ್ ಸಂಕಲನ ಮಾಡಿದ್ದಾರೆ. ಹಿನ್ನಲೆ ಸಹಕಾರವನ್ನು ಚಿತ್ರೇಶ್ ಶೆಟ್ಟಿ ನಾಳ, ರಂಜಿತ್, ಪುಷ್ಪ, ಶಾಂತಾರಾಮ್, ಧನ್ ರಾಜ್, ಉಮೇಶ್ ಸಂಬೊಳ್ಯ , ಹಿಂದವೀ ಯೂತ್ಸ್ ನಾಳ ನೀಡಿದ್ದು, ದೇಗುಲದ ವ್ಯವಸ್ಥಾಪಕ ಗಿರೀಶ್ ಜಿ. ಎಸ್., ವಸಂತ ಮಜಲು, ರಾಜೇಶ್, ಯೋಗೀಶ್ ಅಡ್ಡಕೊಡಂಗೆ, ಮೋಹನ್ ತರೆಮಾರು, ಮನೋಜ್ ಕುಲಾಲ್ ಉಜಿರೆ, ಶಾನ್ ಕುಲಾಲ್ ಉಜಿರೆ, ಸಂದೀಪ್ ಗಾಣಿಗ ನಾಳ, ರಂಜನ್ ಮುದ್ದುಂಜ, ಸಂಧ್ಯಾ ಸುನಿಲ್ ನಾಳ, ಸಂದೇಶ್ ನಾಳ ಸಹಕಾರ ನೀಡಿದ್ದಾರೆ.

ಭಜನಾ ನೃತ್ಯದಲ್ಲಿ ಅನನ್ಯ, ಧೃತಿ, ಸುಧೀಕ್ಷಾ, ನಿರೀಕ್ಷಾ, ರಿತಿಕಾ, ನವ್ಯ, ಭವಿಷ್ಯ, ಇಂಚರ, ಪ್ರತ್ಯಕ್ಷ, ಜೀವಿತಾ ,ಧನುಶ್ರೀ, ಸಾಕ್ಷಿ , ಶರಣ್ಯ, ತೇಜಸ್ವಿನಿ , ಮಲ್ಲಿಕಾ ಹಾಡಿಗೆ ಸಹಕರಿಸಿದರು.
ಭಕ್ತಿಗೀತೆ ಆಲ್ಬಂ ಸಾಂಗ್ ಬಿಡುಗಡೆ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು, ಅಭಿವೃದ್ಧಿ ಸಮಿತಿ, ಭಜನ ಮಂಡಳಿ, ಮಾತೃ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.