ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ನೇತ್ರಾವತಿ ನದಿಯಲ್ಲಿ ಯುವಕನೋರ್ವನ ಮೃತದೇಹ ಪತ್ತೆ..!:ಹಿಂದೂ ಸಂಘಟನಾ ಮುಖಂಡ ರಾಜೇಶ್ ಸುವರ್ಣ ಮೃತ್ಯು..!:ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸ್ಥಳೀಯರು..!

ನೇತ್ರಾವತಿ ನದಿಯಲ್ಲಿ ಯುವಕನೋರ್ವನ ಮೃತದೇಹ ಪತ್ತೆ..!:ಹಿಂದೂ ಸಂಘಟನಾ ಮುಖಂಡ ರಾಜೇಶ್ ಸುವರ್ಣ ಮೃತ್ಯು..!:ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸ್ಥಳೀಯರು..!

ಬಂಟ್ವಾಳ : ಪಾಣೆಮಂಗಳೂರು ಸೇತುವೆಯ ಸಮೀಪದ ನೇತ್ರಾವತಿ ನದಿಯಲ್ಲಿ ಯುವಕನೋರ್ವನ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕಿಯನ್ನು ಸಜಿಪನಡು ಸಾನದಮನೆ ನಿವಾಸಿ, ಹಿಂದುಪರ ಸಂಘಟನೆಗಳ ಮುಖಂಡ ರಾಜೇಶ್ ಸುವರ್ಣ ಎಂದು ಗುರುತಿಸಲಾಗಿದೆ. ಸೇತುವೆ ಬಳಿ ರಾತ್ರಿ ದ್ವಿಚಕ್ರ ವಾಹನವೊಂದು ತಡೆಗೊಡೆಗೆ ಡಿಕ್ಕಿ ಹೊಡೆದ ಸ್ಥಿತಿಯಲ್ಲಿತ್ತು. ಹೀಗಾಗಿ ಈ ರಸ್ತೆಯಲ್ಲಿ ಹಾದು ಹೋಗುವವರು ಅನುಮಾನಗೊಂಡು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಬಂಟ್ವಾಳ ನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವ್ಯಕ್ತಿ ನದಿಗೆ ಬಿದ್ದಿರಬಹುದೆಂದು ಅನುಮಾನಗೊಂಡು ಪೊಲೀಸರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದು. ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ, ಪೊಲೀಸರು ಹಾಗೂ ಸ್ಥಳೀಯರ ಸಹಾಯದಿಂದ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಬೆಳಗ್ಗೆಯವರೆಗೂ ಶೋಧ ನಡೆಸಿದ್ದ ಅಗ್ನಿಶಾಮಕ ಸಿಬ್ಬಂದಿಗೆ ನದಿಯಲ್ಲಿ ವ್ಯಕ್ತಿಯ ಮೃತದೇಹ ದೊರೆತಿದೆ. ಪೊಲೀಸರು ವ್ಯಕ್ತಿಯ ಗುರುತು ಪತ್ತೆಗಾಗಿ ತನಿಖೆ ಕೈಗೊಂಡು ವಾಹನ ಸಂಖ್ಯೆ ಮತ್ತು ಇತರ ಮಾಹಿತಿ ಆಧರಿಸಿ ಸಾವನ್ನಪ್ಪಿರುವ ಯುವಕನನ್ನು ರಾಜೇಶ್ ಸುವರ್ಣ ಎಂದು ಗುರುತಿಸಿದ್ದಾರೆ.

ರಾಜೇಶ್ ಸುವರ್ಣ ಓರ್ವ ಹಿಂದೂ ಸಂಘಟನೆ ಮುಖಂಡನಾಗಿದ್ದು ಕೆಲವು ವರ್ಷಗಳಿಂದ ಹಿಂದುಪರ ಸಂಘಟನೆಗಳಾದ ವಿಶ್ವ ಹಿಂದು ಪರಿಷತ್, ಬಜರಂಗದಳಗಳಲ್ಲಿ ಗುರುತಿಸಿಕೊಂಡಿದ್ದರು. ಕಲ್ಲಡ್ಕ ವಲಯದ ಬಜರಂಗದಳದ ಮುಖಂಡರೂ ಆಗಿದ್ದರು. ನದಿಯಲ್ಲಿ ಮೃತದೇಹ ದೊರೆತ ನಂತರ ಪೊಲೀಸರು ಸಂಬಂಧಪಟ್ಟವರಿಗೆ ಮಾಹಿತಿ ರವಾನಿಸಿದ್ದಾರೆ. ರಾಜೇಶ್ ಸುವರ್ಣ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ರವಾನಿಸಿಲಾಗಿದ್ದು. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲು ಪೊಲೀಸರು ನಿರ್ಧರಿಸಿದ್ದಾರೆ.

ಘಟನೆಯ ಬಳಿಕ ರಾಜೇಶ್ ಸುವರ್ಣ ಸಾವಿನ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದು, ಬುಧವಾರ ರಾತ್ರಿ ಪಾಣೆಮಂಗಳೂರು ಸೇತುವೆ ಬಳಿ ವಾಹನದಲ್ಲಿ ಸಾಗುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿ ಮಗುಚಿ ನದಿಗೆ ಬಿದ್ದಿದ್ದಾರೆಯೇ, ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಯಾರಾದರೂ ಡಿಕ್ಕಿ ಹೊಡೆದು ಅವರನ್ನು ನದಿಗೆ ತಳ್ಳಿ ಪರಾರಿಯಾಗಿದ್ದಾರೆಯೇ ಎಂದು ಸ್ಥಳೀಯರು ಅನುಮಾನಪಟ್ಟಿದ್ದಾರೆ. ಸಾವಿಗೆ ನಿಖರ ಕಾರಣ ಗುರುತಿಸುವ ಕಾರ್ಯ ನಡೆಯುತ್ತಿದೆ. ಈ ಆಯಾಗಳಲ್ಲೂ ಪೊಲೀಸರು ತನಿಖೆ ಆರಂಭಿಸಿ, ಪ್ರಾಥಮಿಕ ಮಾಹಿತಿ ಕಲೆ ಹಾಕುತ್ತಿದ್ದಾರೆ.ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!