ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಧರ್ಮಸ್ಥಳ ಮ್ಯೂಸಿಯಂಗೆ ಉದ್ಯಮಿಯಿಂದ ಹಳೇ ಮಾಡೆಲ್ ನ ಸ್ಕೂಟರ್ ಕೊಡುಗೆ

ಧರ್ಮಸ್ಥಳ ಮ್ಯೂಸಿಯಂಗೆ ಉದ್ಯಮಿಯಿಂದ ಹಳೇ ಮಾಡೆಲ್ ನ ಸ್ಕೂಟರ್ ಕೊಡುಗೆ

 

 

 

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಮ್ಯೂಸಿಯಂಗೆ ಬೆಂಗಳೂರಿನಲ್ಲಿ ಚಿನ್ನದ ಉದ್ಯಮ‌ ಮಾಡುತ್ತಿರುವ ಕುಟುಂಬ ಧರ್ಮಸ್ಥಳಕ್ಕೆ ಅಗಮಿಸಿ ಧರ್ಮಾಧಿಕಾರಿಗಳಿಗೆ 1984 ಮಾಡೆಲ್ ನ ಸ್ಕೂಟರ್ ಹಾಗೂ ಅದರ ದಾಖಲೆ ಪತ್ರಗಳನ್ನು ಹಸ್ತಾಂತರ ಮಾಡಿದರು.

ಬೆಂಗಳೂರು ನಗರತ್ ಪೇಟೆಯಲ್ಲಿ ಮುನೋತ್ ಜ್ಯುವೆಲರಿ ಎಂಬ ಚಿನ್ನದ ವ್ಯಾಪಾರ ನಡೆಸುತ್ತಿರುವ ಗುಜರಾತ್ ನಿವಾಸಿ ಬಾಬು ಲಾಲ್ ಜೀ ಮತ್ತು ಕುಟುಂಬ ಸಮೇತ ಜ.29 ರಂದು ಬೆಳಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅಗಮಿಸಿ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ 1984 ಮೊಡೆಲ್ ನ ಉತ್ತಮ‌ ಕಂಡಿಷನ್ ಇರುವ ಬಜಾಜ್ ಕಂಪನಿಯ ಪ್ರಿಯಾ ಸ್ಕೂಟರ್ ಮತ್ತು ದಾಖಲೆ ಪತ್ರಗಳನ್ನು ಹಸ್ತಾಂತರ ಮಾಡಿದರು.

 

 

ಚಿನ್ನದ ವ್ಯಾಪಾರಿ ಬಾಬು ಲಾಲ್ ಜೀ ಅವರು 1984 ರಲ್ಲಿ ಹೊಸದಾಗಿ ಖರೀದಿಸಿ ಉಪಯೋಗಿಸುತ್ತಿದ್ದರು. ಕಳೆದ ಐದು ವರ್ಷಗಳಿಂದ ತನ್ನ ಮನೆಯಲ್ಲಿ ಸರಿಯಾದ ಸರ್ವಿಸ್‌ ಗಳನ್ನು ಮಾಡಿಸಿ ಇಟ್ಟುಕೊಂಡಿದ್ದರು ಇದೀಗ ಧರ್ಮಸ್ಥಳಕ್ಕೆ ನೀಡಬೇಕೆಂದು ಕುಟುಂಬ ಸದಸ್ಯರು ನಿರ್ಧರಿಸಿದರು ಅದರಂತೆ ಜ.29 ರಂದು ಕುಟುಂಬ ಸಮೇತ ಟೆಂಪೋ ಟ್ರಾವೆರ್ ನಲ್ಲಿ ಸ್ಕೂಟರ್ ಜೊತೆ ಅಗಮಿಸಿ ಪ್ರೀತಿಯಿಂದ ಧರ್ಮಾಧಿಕಾರಿಯವರಿಗೆ ಸ್ಕೂಟರ್ ಹಸ್ತಾಂತರ ಮಾಡಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!