ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಮಾಜಿ ಶಾಸಕ ವಸಂತ ಬಂಗೇರ ಸಹೋದರ ಶತಾಯುಷಿ ಕೆ.ಜಿ. ಬಂಗೇರ ನಿಧನ:

ಮಾಜಿ ಶಾಸಕ ವಸಂತ ಬಂಗೇರ ಸಹೋದರ ಶತಾಯುಷಿ ಕೆ.ಜಿ. ಬಂಗೇರ ನಿಧನ:

 

 

 

 

ಬೆಳ್ತಂಗಡಿ: ಬಿಲ್ಲವ ಸಂಘದ ಹಿರಿಯ ಮುಖಂಡ ಮಾಜಿ ಶಾಸಕ ವಸಂತ ಬಂಗೇರ ಅವರ ಸಹೋದರ ಕೆ.ಜಿ ಬಂಗೇರ ಅವರು ನಿಧನ ಹೊಂದಿದ್ದಾರೆ.ತಾಲೂಕಿನ ಕರಾಯ ಗ್ರಾಮದ ಮುಗ್ಗ ಗುತ್ತು ಕುಟುಂಬದ ಹಿರಿಯರಾದ ಕೇದೆ ಗುರುವಪ್ಪ ಬಂಗೇರ (101) ಮಂಗಳೂರಿನ ಪಾಂಡೇಶ್ವರದ ತಮ್ಮ ಸ್ವಗೃಹದಲ್ಲಿ ಜ 25 ರಂದು ನಿಧನ ಹೊಂದಿದ್ದಾರೆ.‌ನಿವೃತ್ತ ಕಂದಾಯ ಅಧಿಕಾರಿಯಾಗಿ ನಂತರ ಡೆಪ್ಯೂಟಿ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿದ್ದರು. ಬಿಲ್ಲವ ಸಮಾಜ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇವರು ಬೆಳ್ತಂಗಡಿ ಶ್ರೀ ಗುರುದೇವಾ ವಿವಿದೋದ್ದೇಶ ಸೇವಾ ಸಹಕಾರಿ ಸಂಘದ ಸ್ಥಾಪಕಾಧ್ಯಕ್ಷರಾಗಿ ಶ್ರೀ ಗುರುದೇವ ಕಾಲೇಜ್ ಬೆಳ್ತಂಗಡಿ ಇದರ ಟ್ರಸ್ಟಿಯಾಗಿ ಹಲವಾರು ಸೇವಾ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.‌ಕಳೆದ ಬಾರಿ ಇವರ 100ನೇ ವರ್ಷದ ಜನ್ಮದಿನಾಚರಣೆಯನ್ನು ಬೆಳ್ತಂಗಡಿಯಲ್ಲಿ ಬಿಲ್ಲವ ಸಂಘದ ವತಿಯಿಂದ ವಿಜೃಂಭಣೆಯಿಂದ ಆಚರಿಸಲಾಗಿತ್ತು. ಮೃತರು ಪತ್ನಿ ಪುತ್ರ,ಇಬ್ಬರು ಪುತ್ರಿಯರು ಮಾಜಿ ಶಾಸಕರುಗಳಾದ ಕೆ. ವಸಂತ ಬಂಗೇರ ಹಾಗೂ ಕೆ. ಪ್ರಭಾಕರ ಬಂಗೇರ ಸೇರಿದಂತೆ ಅಪಾರ ಬಂಧು ವರ್ಗದವರನ್ಬು ಅಗಲಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!