ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಮಾ.4 ರಂದು ಬೆಳ್ತಂಗಡಿ ಬೀಟ್ ರಾಕರ್ಸ್ ಸ್ಟಾರ್ ನೈಟ್ ಡ್ಯಾನ್ಸ್ ಹಾಗೂ ಸೆಲೆಬ್ರಿಟಿ ಶೋ: ಮಾರಿಗುಡಿ ಮೈದಾನದಲ್ಲಿ ಕಾರ್ಯಕ್ರಮ

ಮಾ.4 ರಂದು ಬೆಳ್ತಂಗಡಿ ಬೀಟ್ ರಾಕರ್ಸ್ ಸ್ಟಾರ್ ನೈಟ್ ಡ್ಯಾನ್ಸ್ ಹಾಗೂ ಸೆಲೆಬ್ರಿಟಿ ಶೋ: ಮಾರಿಗುಡಿ ಮೈದಾನದಲ್ಲಿ ಕಾರ್ಯಕ್ರಮ

ಬೆಳ್ತಂಗಡಿ : ಬೀಟ್ ರಾಕರ್ಸ್ ಡ್ಯಾನ್ಸ್ ಅಕಾಡೆಮಿ ಬೆಳ್ತಂಗಡಿ ಇದರ 12 ನೇ ವರ್ಷದ ಬೆಳ್ತಂಗಡಿ ಸ್ಟಾರ್ ನೈಟ್ ಡ್ಯಾನ್ಸ್ ಹಾಗೂ ಸೆಲೆಬ್ರಿಟಿ ಶೋ ಕಾರ್ಯಕ್ರಮ ಮಾ.4 ರಂದು ಬೆಳ್ತಂಗಡಿ ಮಾರಿಗುಡಿ ಮೈದಾನದಲ್ಲಿ ನಡೆಯಲಿದೆ .

ಈ‌ ಕುರಿತು ಫೆ.28 ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ನಿರ್ದೇಶಕ ಜಿತೇಶ್ ಕುಮಾರ್ ಬೀಟ್ ರಾಕರ್ಸ್ ಸಂಸ್ಥೆ ಕಳೆದ 12 ವರ್ಷಗಳಿಂದ ಉಜಿರೆ- ಬೆಳ್ತಂಗಡಿಯಲ್ಲಿ ಡ್ಯಾನ್ಸ್ ತರಗತಿ ನಡೆಸುತ್ತಿದ್ದು, ಸುಮಾರು 80 ಮಕ್ಕಳು ತರಬೇತಿ ಪಡೆಯುತ್ತಿದ್ದಾರೆ. ನಾವು ಸಂಸ್ಥೆಯಲ್ಲಿ ಸರಕಾರಿ ಶಾಲೆಯ 25 ಮಕ್ಕಳಿಗೆ ಉಚಿತ ತರಬೇತಿ ನೀಡುತ್ತಿದ್ದೇವೆ. ಸಂಸ್ಥೆಯ ವತಿಯಿಂದ ಪ್ರತಿವರ್ಷ ಸ್ಟಾರ್ ನೈಟ್‌ ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ಆಯೋಜನೆ ಮಾಡುತ್ತಿದ್ದು ಈ ವರ್ಷ ಜಿಲ್ಲೆಯ ಹೆಸರಾಂತ ಗಾಯಕರಿಂದ ಸಂಗೀತ ರಸ ಮಂಜರಿ ಸ್ವರ ಸಂಗಮ, ಕಲಾ ಶ್ರೀ ಕುಡ್ಲ ಬಲೇ ತೆಲಿಪಾಲೆ ತಂಡದಿಂದ ಕುಸಲ್ದ ಕುರ್ಲರಿ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮವನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಲಿದ್ದು ವಿವಿಧ ಕ್ಷೇತ್ರದ ಗಣ್ಯರುಗಳು ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಸಮಿತಿ ಅಧ್ಯಕ್ಷೆ ಪ್ರತಿಮಾ ಗೌಡ, ಕಾರ್ಯದರ್ಶಿ ವಿದ್ಯಾ ಪ್ರಶಾಂತ್, ಜೊತೆ ಕಾರ್ಯದರ್ಶಿ ಪೂರ್ಣಿಮಾ, ಕೋಶಾಧಿಕಾರಿ ರಮೇಶ್ ಉಪಸ್ಥಿತರಿದ್ದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!