ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಲಾಯಿಲ ಗುಡ್ಡದಲ್ಲಿ ಅಗ್ನಿ ಅವಘಡ:ಪಕ್ಕದ ರಬ್ಬರ್ ತೋಟಕ್ಕೂ ಹಬ್ಬಿದ ಬೆಂಕಿ: ನಿಯಂತ್ರಣಕ್ಕೆ ಬಾರದ ಬೆಂಕಿ, ಅಗ್ನಿ ಶಾಮಕ ಹಾಗೂ ಸ್ಥಳೀಯರಿಂದ ಹರಸಾಹಸ:

ಲಾಯಿಲ ಗುಡ್ಡದಲ್ಲಿ ಅಗ್ನಿ ಅವಘಡ:ಪಕ್ಕದ ರಬ್ಬರ್ ತೋಟಕ್ಕೂ ಹಬ್ಬಿದ ಬೆಂಕಿ: ನಿಯಂತ್ರಣಕ್ಕೆ ಬಾರದ ಬೆಂಕಿ, ಅಗ್ನಿ ಶಾಮಕ ಹಾಗೂ ಸ್ಥಳೀಯರಿಂದ ಹರಸಾಹಸ:

 

 

 

ಬೆಳ್ತಂಗಡಿ : ದಿನದಿಂದ ದಿನೇ ಬಿಸಿಲಿನ ತಾಪ ಹೆಚ್ಚಾಗುತಿದ್ದು ಅಲ್ಲಲ್ಲಿ ಅಗ್ನಿ ಅನಾಹುತಗಳು ಸಂಭವಿಸುತ್ತಿದೆ.ಲಾಯಿಲ ಗ್ರಾಮದ ಗುರಿಂಗಾನ ಎಂಬಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿದೆ.ಲಾಯಿಲ ಗ್ರಾಮದ ಗುರಿಂಗಾನ ಎಂಬಲ್ಲಿ ಫೆ 26 ಮಧ್ಯಾಹ್ನ ಗುಡ್ಡಕ್ಕೆ ಬೆಂಕಿ ಬಿದಿದ್ದು ಸಮೀಪದ  ರಬ್ಬರ್ ತೋಟಕ್ಕೂ ಬೆಂಕಿ ವ್ಯಾಪಿಸಿದೆ. ಸ್ಥಳೀಯರು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದರು.ಅಗ್ನಿ ಶಾಮಕ ದಳ ಹಾಗೂ ಸ್ಥಳೀಯರು ನಂದಿಸುವ ಕಾರ್ಯ ಮಾಡಿದರೂ ಬೆಂಕಿ ಅವಾಗಲೇಎರಡು ಎಕರೆ ರಬ್ಬರ್ ಗುಡ್ಡ ಸೇರಿದಂತೆ 5 ಎಕರೆಯಷ್ಟು ಗುಡ್ಡದಲ್ಲಿ ಬೆಂಕಿ ವ್ಯಾಪಿಸಿದೆ.ಬೆಂಕಿ ಅನಾಹುತಕ್ಕೆ ಕಾರಣ ತಿಳಿದು ಬಂದಿಲ್ಲ ಈಗಾಗಲೇ ಎರಡು  ಅಗ್ನಿಶಾಮಕ ಇಲಾಖೆಯ ತಂಡಗಳು, ಲಾಯಿಲ ಗ್ರಾಮ  ಪಂಚಾಯತ್ ಹಾಗೂ ಸ್ಥಳೀಯರು ಬೆಂಕಿ ನಂದಿಸಲು ಶತಪ್ರಯತ್ನ ಮಾಡುತಿದ್ದಾರೆ.ಕಳೆದ ವಾರವಷ್ಟೇ ಲಾಯಿಲ ಗ್ರಾಮದ ಪಡ್ಲಾಡಿ ಎಂಬಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು ಅಗ್ನಿಶಾಮಕ ಇಲಾಖೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿತ್ತು. ಸ್ಥಳೀಯರ ಸಮಯಪ್ರಜ್ಙೆಯಿಂದ ದೊಡ್ಡ ಅನಾಹುತ ತಪ್ಪಿತ್ತು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!