ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಕೊಕ್ಕಡ,ಟಿಪ್ಪರ್ ಬೈಕ್ ಡಿಕ್ಕಿ ಗಂಭೀರ ಗಾಯಗೊಂಡಿದ್ದ ಯುವಕ ಸಾವು ..

ಕೊಕ್ಕಡ,ಟಿಪ್ಪರ್ ಬೈಕ್ ಡಿಕ್ಕಿ ಗಂಭೀರ ಗಾಯಗೊಂಡಿದ್ದ ಯುವಕ ಸಾವು ..

 

 

 

ಬೆಳ್ತಂಗಡಿ:ಮರಳು ಸಾಗಿಸುವ ಟಿಪ್ಪರ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ಕೊಕ್ಕಡದ ಸಿರಾಜುದ್ದೀನ್ (34) ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟ ಘಟನೆ ವರದಿಯಾಗಿದೆ.

ಸಿರಾಜುದ್ದೀನ್ ರವರು ಕೊಕ್ಕಡದಿಂದ ಉಪ್ಪಾರಪಳಿಕೆ ಗೋಳಿತೊಟ್ಟು ಮಾರ್ಗವಾಗಿ ಬಿಸಿ ರೋಡಿಗೆ ಹೋಗುವ ಸಂದರ್ಭ ಕೊಲ್ಲಾಜೆಪಳಿಕೆ ಎಂಬಲ್ಲಿ ಕೊಕ್ಕಡದ ಕಡೆಗೆ ಬರುತ್ತಿದ್ದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ವಾರ ಸತತ ಚಿಕಿತ್ಸೆ ನೀಡಿದರೂ ಸ್ಪಂದಿಸದ ಕಾರಣ ಫೆ.7ರ ಸಂಜೆ ಕೊನೆಯುಸಿರೆಳೆದರು. ಸಿರಾಜುದ್ದೀನ್ ಪಟ್ರಮೆ ಗ್ರಾಮದ ಅಬೂಬಕ್ಕರ್ ಎಂಬುವವರ ಮಗನಾಗಿದ್ದು ಕಳೆದ 12 ವರ್ಷಗಳಿಂದ ಕೊಕ್ಕಡ ಪಟ್ರಮೆ ಭಾಗಗಳಲ್ಲಿ ಅಡಕೆ ವ್ಯಾಪಾರ ನಡೆಸುತ್ತಿದ್ದರು. SKSSF ಕೊಕ್ಕಡ ಯುನಿಟ್ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಜಿಲ್ಲಾ ವಿಖಾಯ ಆಕ್ಟಿವ್ ವಿಂಗ್ ಮೆಂಬರ್ ಆಗಿಯೂ ಸೇವೆ ಸಲ್ಲಿಸುತ್ತಿದ್ದರು . ಮೃತರು ತಂದೆ, ತಾಯಿ, ಪತ್ನಿ ಹಾಗೂ ಒಂದು ವರ್ಷ ಪ್ರಾಯದ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಕಳೆದ ಕೆಲವು ದಿನಗಳಿಂದ ಕೊಕ್ಕಡ ಭಾಗಗಳಲ್ಲಿ ಮರಳು ಟಿಪ್ಪರ್ ಹಾಗೂ ಲಾರಿಗಳು ಅತೀ ವೇಗದ ಚಾಲನೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!