ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ವೋಟರ್ ಐಡಿಯೊಂದಿಗೆ ಆಧಾರ್ ಲಿಂಕ್: 2024ರ ಮಾರ್ಚ್ 31ರವರೆಗೆ ಗಡುವು ವಿಸ್ತರಣೆ: ಕಾನೂನೂ ಮತ್ತು ನ್ಯಾಯ ಸಚಿವಾಲಯದಿಂದ ಆದೇಶ

ವೋಟರ್ ಐಡಿಯೊಂದಿಗೆ ಆಧಾರ್ ಲಿಂಕ್: 2024ರ ಮಾರ್ಚ್ 31ರವರೆಗೆ ಗಡುವು ವಿಸ್ತರಣೆ: ಕಾನೂನೂ ಮತ್ತು ನ್ಯಾಯ ಸಚಿವಾಲಯದಿಂದ ಆದೇಶ

ನವದೆಹಲಿ: ಆಧಾರ್ ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿಗಳೊಂದಿಗೆ ಲಿಂಕ್ ಮಾಡಲು 2023ರ ಏಪ್ರಿಲ್ 1ರಂದು ಕೊನೆಯ ದಿನ ಆಗಿತ್ತು. ಸದ್ಯ ಈ ಗಡುವನ್ನು ವಿಸ್ತರಿಸಿ ಕಾನೂನೂ ಮತ್ತು ನ್ಯಾಯಸಚಿವಾಲಯ 2024ರ ಮಾರ್ಚ್ 31 ರವರೆಗೆ ಅವಕಾಶ ನೀಡಿ ಆದೇಶಿಸಿದೆ.

ನೋಂದಾಯಿತ ಮತದಾರರು ತಮ್ಮ ವೋಟರ್ ಐಡಿಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ಅಭಿಯಾನವನ್ನು ಆರಂಭಿಸಿದ್ದು, ಈ ಮೂಲಕ ಪ್ರಮುಖವಾಗಿ ನಕಲಿ ಮತದಾನವನ್ನು ತಡೆಯಲು ಸಾಧ್ಯವಾಗಲಿದೆ. ಮತಗಟ್ಟೆ ಅಧಿಕಾರಿಗಳು ಮತದಾರರ ಚೀಟಿ- ಆಧಾರ್ ಕಾರ್ಡ್ನ್ನು ಪಡೆದು ದಾಖಲಿಸಿಕೊಳ್ಳುತ್ತಾರೆ. ಒಂದು ಸಲ ವೋಟರ್ ಐಡಿ ಮತ್ತು ಆಧಾರ್ ಕಾರ್ಡ್ ಸಂಖ್ಯೆ ದಾಖಲಿಸಿದರೆ ಸಾಕು, ನಕಲಿ ಮತದಾನ ತಡೆಯಲು ಅತ್ಯಂತ ಪರಿಣಾಮಕಾರಿಯಾಗಲಿದೆ ಎಂದು ಸಚಿವಾಲಯ ತಿಳಿಸಿದೆ.

ವೋಟರ್ ಐಡಿಯೊಂದಿಗೆ ಆಧಾರ್ ಲಿಂಕ್ ವಿಧಾನ:

ಸರ್ಕಾರದ ಅಧಿಕೃತ ಪೋರ್ಟಲ್ ಆಗಿರುವ http://voterportal.eci.gov.in ಗೆ ಭೇಟಿ ನೀಡಬೇಕು. ನಿಮ್ಮ ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ಮತ್ತು ಮತದಾರರ ಗುರುತಿನ ವೋಟರ್ ಚೀಟಿಯ ಸಂಖ್ಯೆಯನ್ನು ಬಳಸಿಕೊಂಡು ಪೋರ್ಟಲ್‌ಗೆ ಲಾಗ್ ಇನ್ ಮಾಡಬೇಕು. ನಂತರ ನಿಮ್ಮ ರಾಜ್ಯ, ಜಿಲ್ಲೆ ಮತ್ತು ಹೆಸರು, ಹುಟ್ಟಿದ ದಿನಾಂಕ ಹಾಗೂ ತಂದೆ ಹೆಸರು ಸೇರಿದಂತೆ ನಿಮ್ಮ ವೈಯಕ್ತಿಕ ಮಾಹಿತಿ ನಮೂದಿಸಬೇಕಾಗುತ್ತದೆ. ಬಳಿಕ ಸರ್ಚ್ ಕ್ಲಿಕ್ ಮಾಡಿದ ನಂತರ, ಸ್ಕ್ರೀನ್ ಮೇಲೆ ಕಾಣಿಸುತ್ತೆ. ಇದಾದ ಬಳಿಕ ಫೀಡ್ ಆಧಾರ್ ನಂಬರ್ ಆಫಷನ್ ಮೇಲೆ ಕ್ಲಿಕ್ ಮಾಡಬೇಕು. ಆಧಾರ್ ಸಂಖ್ಯೆಯೊಂದಿಗೆ ವೋಟರ್ ಐಡಿ ಸಂಖ್ಯೆ ಹಾಗೂ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ನೋಂದಾಯಿತ ಇಮೇಲ್ ಅನ್ನು ವೆಬ್‌ಪುಟದಲ್ಲಿನ ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ ಸಬ್‌ಮಿಟ್ ಕ್ಲಿಕ್ ಮಾಡಬೇಕು. ವೋಟರ್ ಐಡಿ ಮತ್ತು ಆಧಾರ್ ಕಾರ್ಡ್ನ್ನು ಲಿಂಕ್ ಮಾಡುವ ಪ್ರಕ್ರಿಯೆ ಆರಂಭವಾಗುತ್ತದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!