ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಪುತ್ತೂರಿನ 'ಒಳಿತು ಮಾಡು ಮನುಷ್ಯ' ತಂಡದಿಂದ 21ನೇ ಸೇವಾ ಕಾರ್ಯಕ್ರಮ: ಕಿಡ್ನಿ ವೈಫಲ್ಯ, ಕ್ಯಾನ್ಸರ್ ಹಾಗೂ ಬೆನ್ನು ಮೂಳೆ ಮುರಿತಕ್ಕೆ ಒಳಗಾದವರಿಗೆ ಕಿಟ್ ವಿತರಣೆ

ಪುತ್ತೂರಿನ 'ಒಳಿತು ಮಾಡು ಮನುಷ್ಯ' ತಂಡದಿಂದ 21ನೇ ಸೇವಾ ಕಾರ್ಯಕ್ರಮ: ಕಿಡ್ನಿ ವೈಫಲ್ಯ, ಕ್ಯಾನ್ಸರ್ ಹಾಗೂ ಬೆನ್ನು ಮೂಳೆ ಮುರಿತಕ್ಕೆ ಒಳಗಾದವರಿಗೆ ಕಿಟ್ ವಿತರಣೆ

ಪುತ್ತೂರು: ವಿಷನ್ ಸಹಾಯನಿಧಿ ಸೇವಾ ಟ್ರಸ್ಟ್ನ ಆಶ್ರಯದಲ್ಲಿ ಜೆಸಿಐ ಪುತ್ತೂರು, ಲಯನ್ಸ್ ಕ್ಲಬ್, ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿ ಇದರ ಸಹಯೋಗದೊಂದಿಗೆ ನೇತ್ರದಾನ ನೋಂದಣಿ, ಉಚಿತ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ತಪಾಸಣಾ ಶಿಬಿರ ಹಾಗೂ ಊರ ಪರವೂರ ಸಹೃದಯಿ ದಾನಿಗಳ ಸಹಕಾರದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಅಶಕ್ತರಿಗೆ ನಿರಂತರವಾಗಿ ಆಹಾರ ಸಾಮಗ್ರಿಗಳ ಕಿಟ್ ನೀಡುವ 21ನೇ ಯೋಜನೆ ‘ಒಳಿತು ಮಾಡು ಮನುಷ' ಕಾರ್ಯಕ್ರಮವು ಮಾ.5 ರಂದು ಪುತ್ತೂರಿನ " ಸೈನಿಕ ಭವನ ರಸ್ತೆಯಲ್ಲಿರುವ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಕೇಶವ ನಾಯ್ಕ್ ಸಾಲ್ಮರ ಮಾತನಾಡಿ ಈ ಸಂಸ್ಥೆಯು ಉತ್ತಮವಾಗಿ ಬೆಳೆಯಲಿ, ಬಹಳ ಒಳ್ಳೆಯ ಕೆಲಸವನ್ನು ಮಾಡುತ್ತಿದೆ. ಇನ್ನೂ ಒಳ್ಳೆಯ ಕೆಲಸ ಮಾಡಲಿ’ ಎಂದು ಹಾರೈಸಿ, ಯಶಸ್ವಿನಿ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಿದರು.

ಒಳಿತು ಮಾಡು ಮನುಷ (ರಿ) ಬೆಂಗಳೂರು ಇದರ ಸದಸ್ಯರಾದ ಹಾಲಿ ಪರ್ಲಡ್ಕರವರು ಮಾತನಾಡಿ ‘ಒಳಿತು ಮಾಡು ಮಾನುಷ ತಂಡ ಪುತ್ತೂರಿನಲ್ಲಿ ಕೂಡ ಇದೆ ಎಂದು ತಿಳಿದು ತುಂಬಾ ಸಂತೋಷವಾಯಿತು. ಇನ್ನೂ ಕೂಡ ಈ ಸಂಸ್ಥೆಯು ಮುಂದುವರಿಯಬೇಕು. ಬಡ ಜನರಿಗೆ ಪ್ರಯೋಜನ ಆಗಬೇಕು. ಯಾವಾಗಲೂ ನಾನು ಈ ಸಂಸ್ಥೆಗೆ ಒಳ್ಳೆಯದನ್ನೇ ಆಶಿಸುತ್ತೇನೆ’ ಎಂದು ತಂಡಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಕಿಡ್ನಿ ವೈಫಲ್ಯ, ಕ್ಯಾನ್ಸರ್ ಹಾಗೂ ಬೆನ್ನು ಮೂಳೆ ಮುರಿತಕ್ಕೆ ಒಳಗಾದವರಿಗೆ 62,000 ಮೊತ್ತದ 62 ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡಲಾಯಿತು. ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಬಡಗನ್ನೂರಿನ ಕು. ಅನನ್ಯ ಇವರಿಗೆ ಒಂದು ತಿಂಗಳಿಗೆ ಬೇಕಾಗಿರುವ 2750/- ರೂಪಾಯಿಯ ಔಷಧಿಯನ್ನು ನೀಡಲಾಯಿತು. ಹಾಗೂ 47 ಜನರಿಗೆ ಬಿಪಿ, ಶುಗರ್ ತಪಾಸಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷರಾದ ಶ್ರೀಮತಿ ಶೋಭಾ ಮಡಿವಾಳ, ಸ್ಥಾಪಕ ಅಧ್ಯಕ್ಷರಾದ ಜೆಸಿ ಚೇತನ್ ಕುಮಾರ್ ಸದಸ್ಯರಾದ ವಿಜಯ್ ಕುಮಾರ್, ಸೌಜನ್ಯ ಅರ್ಲಪದವು, ಮಾಲಿನಿ, ಕಾವ್ಯ, ಸರಸ್ವತಿ, ಪುಷ್ಪ, ಸ್ವಾತಿ ಎ, ಕುಮಾರಿ ದಿವ್ಯ, ಅಕ್ಷಯ ಕುಲಾಲ್ ಉಪಸ್ಥಿತರಿದ್ದರು. ಸ್ವಾತಿ ಪ್ರಾರ್ಥಿಸಿ, ಮಮತಾ ಸ್ವಾಗತಿಸಿ, ಹರ್ಷಿತಾ ಧನ್ಯವಾದ ಸಮರ್ಪಿಸಿದರು. ಶೃತಿಕ ಜಲ್ಸುರ್ ಕಾರ್ಯಕ್ರಮವನ್ನು ನಿರೂಪಿಸಿದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!