ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಆದರ್ಶ ನಗರ ನಿವಾಸಿ ಹಳ್ಳಿಮನೆ ಹೈದರ್ ಅವರ ಮಗನಾದ ಆರೋಪಿ ಅಜ್ಜು @ ಅಝ್ಗರ್ ಆಲಿ(29) ಎಂಬಾತ ತಲೆಮರೆಸಿಕೊಂಡಿದ್ದು, ಕಳೆದ 3 ವರ್ಷದಿಂದ ಈತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಸದ್ಯ ದಕ್ಷಿಣ ಕನ್ನಡ ಮಹಿಳಾ ಠಾಣೆಯ ಇನ್ಸ್ಪೆಕ್ಟರ್ ಪೈಜುಲ್ಲಾ ಎಂ.ಡಿ ಹಾಗೂ ಸಬ್ ಇನ್ಸ್ಪೆಕ್ಟರ್ ಗಾಯತ್ರಿ ರವರ ಮಾರ್ಗದರ್ಶನದಲ್ಲಿ ಕುಮಾರ ಸ್ವಾಮಿ ಮತ್ತು ರಮೇಶ್‌ರವರ ತಂಡ ಆರೋಪಿ ಚಿಕ್ಕಮಗಳೂರಿನಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಆತನನ್ನು ಬಂಧಿಸಿ ಮಂಗಳೂರು ಪೋಕ್ಸೋ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
Home › 3 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪೋಕ್ಸೋ ಪ್ರಕರಣದ ಆರೋಪಿ ಸೆರೆ: ಖತರ್‌ನಾಕ್ ಆರೋಪಿಯ ಹೆಡೆಮುರಿಕಟ್ಟಿದ ಮಹಿಳಾ ಠಾಣಾ ಪೊಲೀಸರು..