ಫೆ.10 ರಂದು ಅರ್ಜಿಯ ವಿಚಾರಣೆ ನಡೆದಿದ್ದು,ಈ ವೇಳೆ ಸರ್ಕಾರದ ಪರ ವಕೀಲರು, 'ಕೊರೊನಾ ವೇಳೆ ಮಕ್ಕಳಲ್ಲಿನ ಶೈಕ್ಷಣಿಕ ಗುಣಮಟ್ಟ ಕುಸಿದಿದೆ. ಈ ಹಿನ್ನೆಲೆ 5 ಮತ್ತ 8ನೇ ತರಗತಿಗಳಿಗೆ ಬೋರ್ಡ್ ಪರಿಕ್ಷೆ ನಡೆಸಲಾಗುತ್ತಿದೆ. ಆದರೆ, ಈ ಪರೀಕ್ಷೆಯಲ್ಲಿ ಮಕ್ಕಳು ಅನುತ್ತೀರ್ಣರಾದರೂ ಅವರನ್ನು ಅದೇ ತರಗತಿಯಲ್ಲಿ ಮುಂದುವರೆಸುವುದಿಲ್ಲ. ಮಕ್ಕಳ ಬುದ್ಧಿವಂತಿಕೆ ನೋಡುವುದಕ್ಕಾಗಿ ಈ ವ್ಯವಸ್ಥೆ ಜಾರಿ ಮಾಡಲಾಗಿದೆ ಎಂದು ವಿವರಿಸಿದ್ದರು.
ಈ ಬಗ್ಗೆ ಸರ್ಕಾರಕ್ಕೆ 'ಅಂಕಗಳ ಆಧಾರದಲ್ಲಿ ಮಕ್ಕಳ ಬುದ್ಧಿವಂತಿಕೆ ಅಳೆಯುವುದಕ್ಕೆ ಸಾಧ್ಯವೇ' ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಯಾವುದೇ ಗೊಂದಲಗಳಿಗೆ ಒಳಗಾಗದಂತೆ ಹಾಗೂ ಎಲ್ಲ ಮಕ್ಕಳಿಗೂ ಅನ್ವಯವಾಗವಂತಿರಬೇಕು ಎಂದು ಸರ್ಕಾರಕ್ಕೆ ತಿಳಿಸಿತು. ರಾಜ್ಯ ಸರ್ಕಾರ ಯಾವುದೇ ನಿಯಮ ಮತ್ತು ಅಧಿಸೂಚನೆ ಹೊರಡಿಸುತ್ತಿಲ್ಲ. ಶಿಕ್ಷಣ ಕಾಯಿದೆ ಹಕ್ಕು ಅಡಿಗಳಲ್ಲಿ ಸುತ್ತೋಲೆ ಹೊರಡಿಸಿದೆ. ಈ ರೀತಿಯ ಸಂದರ್ಭದಲ್ಲಿ ಕಾಯಿದೆಯ ಸೆಕ್ಷನ್ 38(4) ನಿಯಮಗಳ ಪ್ರಕಾರ ಸರ್ಕಾರಗಳು ಅಧಿಸೂಚನೆ ಹೊರಡಿಸಬೇಕಾದಲ್ಲಿ ನಿಯಮಗಳ ಪ್ರಕಾರ ಇರಬೇಕು. ಮಕ್ಕಳ ಬುದ್ದಿವಂತಿಯನ್ನು ಅಳೆಯಲು ಈ ವಿಧಾನ ಸರಿಯಿಲ್ಲ ಎಂದು ಕೋರ್ಟ್ ಪರೀಕ್ಷೆಯನ್ನು ರದ್ದುಗೊಳಿಸಿದೆ.