ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಅಕ್ರಮ ಮರಳುಗಾರಿಕೆ ತಡೆಯದ ಅಧಿಕಾರಿಗಳು: ಮಿನಿವಿಧಾನ ಸೌಧದ ಮುಂಭಾಗದಲ್ಲಿ ಸಿಪಿಐಎಂ ಮುಖಂಡನ ಉಪವಾಸ ಸತ್ಯಾಗ್ರಹ: ಏಕಾಂಗಿಯಾಗಿ ಪ್ರತಿಭಟಿಸುತ್ತಿರುವ ಶೇಖರ ಲಾಯಿಲ

ಅಕ್ರಮ ಮರಳುಗಾರಿಕೆ ತಡೆಯದ ಅಧಿಕಾರಿಗಳು: ಮಿನಿವಿಧಾನ ಸೌಧದ ಮುಂಭಾಗದಲ್ಲಿ ಸಿಪಿಐಎಂ ಮುಖಂಡನ ಉಪವಾಸ ಸತ್ಯಾಗ್ರಹ: ಏಕಾಂಗಿಯಾಗಿ ಪ್ರತಿಭಟಿಸುತ್ತಿರುವ ಶೇಖರ ಲಾಯಿಲ

 

ಬೆಳ್ತಂಗಡಿ: ಅಕ್ರಮ ಹಾಗೂ ಕಳಪೆ ಕಾಮಗಾರಿಗಳ ಬಗ್ಗೆ ನ್ಯಾಯಾಂಗ ತನಿಖೆಗೆ ನಡೆಸಬೇಕು, ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಸಿಪಿಐ ಎಂ ಮುಖಂಡ ಸಾಮಾಜಿಕ ಹೋರಾಟಗಾರ ಶೇಖರ ಎಲ್ ಅವರು ಬೆಳ್ತಂಗಡಿ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಏಕಾಂಗಿ ಪ್ರತಿಭಟನೆಗೆ ಮಾ. 20 ರಂದು ಚಾಲನೆ ನೀಡಿದರು.

ಬೆಳಿಗ್ಗೆ ,10 ಗಂಟೆಗೆ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ಆರಂಭಿಸಿದರು. ಈ ಸಂದರ್ಭದಲ್ಲಿ ಮಾದ್ಯಮದ ಜೊತೆ ಮಾತನಾಡಿದ ಅವರು 'ತಾಲೂಕಿನಲ್ಲಿ ಕೇವಲ ಐದು ಮಂದಿಗೆ ಮಾತ್ರ ನದಿಯಿಂದ ಮರಳು ತೆಗೆಯಲು ಅಧಿಕೃತ ಪರವಾನಿಗೆ ನೀಡಲಾಗಿದೆ. ಆದರೆ ತಾಲೂಕಿನ ಎಲ್ಲ ನದಿಗಳಲ್ಲಿ, ತೊರೆಗಳಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದೆ ನೂರಾರು ಕಡೆಗಳಲ್ಲಿ ನಡೆಯುತ್ತಿರುವ ಈ ಮರಳುಗಾರಿಕೆ ವಿರುದ್ದ ಯಾವುದೇ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಅಕ್ರಮ ಮರಳುಗಾರಿಕಯೊಂದಿಗೆ ತಾಲೂಕು ಆಡಳಿತ ಪೊಲೀಸ್ ಇಲಾಖೆ ಕೈಜೋಡಿಸಿದೆ ಎಂಬ ಅನುಮಾನ ಬರುವಂತಾಗಿದೆ. ಮರಳುಗಾರಿಕೆ ವಿರುದ್ದ ಕ್ರಮ ಕೈಗೊಳ್ಖುವಂತೆ ಎಷ್ಟು ಮನವಿ ಸಲ್ಲಿಸಿದರೂ ಯಾವುದೇ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಅದರಿಂದಾಗಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದೇನೆ. ಅಕ್ರಮ ಮರಳುಗಾರಿಕೆ ತಾಲೂಕಿನಲ್ಲಿ ಕೋಟ್ಯಾಂತರ ಹಣದ ವ್ಯವಹಾರವಾಗಿ ಬೆಳೆದಿದೆ, ಈ ಅಕ್ರಮ ಮರಳಿಗಾರಿಕೆಯನ್ನು ನಿಯಂತ್ರಿಸುವ ವರೆಗೆ ಹೋರಾಟವನ್ನು ಮುಂದುವರಿಸುತ್ತೇನೆ ಎಂದಿದ್ದಾರೆ.

ಮುಂದುವರಿದು ತಾಲೂಕಿನಲ್ಲಿ ಅಭಿವೃದ್ದಿಯ ಹೆಸರಿನಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ. ಪ್ರವಾಹದ ಬಳಿಕ ನಡೆಸಿದ ಕಾಮಗಾರಿಗಳು ಕಳಪೆಯಾಗಿದ್ದು ನೀರುಪಾಲಾಗಿದೆ, ಅದೇ ರೀತಿ ರಸ್ತೆ ಸೇರಿದಂತೆ ಕಾಮಗಾರಿಗಳು ಕಳಪೆಯಾಗಿದೆ, ಟೆಂಡರ್ ಪ್ರಕ್ರಿಯೆಯಲ್ಲಿಯೂ ಭಾರೀ ಅಕ್ರಮ ನಡೆಯುತ್ತಿದೆ. ನಕಲಿ ಕಂಪನಿಗಳಿಗೆ ಗುತ್ತಿಗೆ ನೀಡಲಾಗುತ್ತಿದೆ. ಈ ಎಲ್ಲ ವಿಚಾರಗಳ ಬಗ್ಗೆ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು . ಈ ಬಗ್ಗೆ ಸ್ಪಷ್ಟ ಭರವಸೆ ಸಿಗುವ ವರೆಗೆ ಪ್ರತಿ ದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30 ರ ವರೆಗೆ ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆ ಮುಂದುವರಿಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!