Home › ಎಂ ಎಸ್ ಡಬ್ಲ್ಯೂ ವಿಭಾಗದ ಉಪನ್ಯಾಸಕ ಶರತ್ ಕುಮಾರ್ ಆರ್‌ರವರಿಗೆ ಪಿಎಚ್‌ಡಿ ಪದವಿ ಪ್ರದಾನ
ಎಂ ಎಸ್ ಡಬ್ಲ್ಯೂ ವಿಭಾಗದ ಉಪನ್ಯಾಸಕ ಶರತ್ ಕುಮಾರ್ ಆರ್‌ರವರಿಗೆ ಪಿಎಚ್‌ಡಿ ಪದವಿ ಪ್ರದಾನ
ONLINE PUDU / Thursday, March 16, 2023
ಮಂಗಳೂರು: ಮಂಗಳ ಗಂಗೋತ್ರಿ ಇದರ 41ನೇ ಘಟಿಕೋತ್ಸವ ಸಮಾರಂಭದಲ್ಲಿ ಎಂ ಎಸ್ ಡಬ್ಲ್ಯೂ ವಿಭಾಗದ ಶರತ್ ಕುಮಾರ್ ಆರ್‌ರವರು ಮಂಡಿಸಿದ ‘ಕ್ವಾಲಿಟಿ ಆಫ್ ವರ್ಕ್ ಲೈಫ್ ಆಫ್ ಟ್ರಾಫಿಕ್ ಪೊಲೀಸ್ ಇನ್ ಕರ್ನಾಟಕ ಸ್ಟೇಟ್’ ಮಹಾ ಪ್ರಬಂಧಕ್ಕೆ ಪಿಎಚ್‌ಡಿ ಪದವಿಯನ್ನು ಪ್ರಧಾನ ಮಾಡಲಾಯಿತು.

ಮೂಲತಃ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯ ಕುಂಞ ನಾಯ್ಕ್ ಮತ್ತು ರತ್ನ ದಂಪತಿಗಳ ಪುತ್ರ. ಕಳೆದ 10 ವರ್ಷಗಳಿಂದ ವಿಶ್ವವಿದ್ಯಾನಿಲಯದ ಎಂ ಎಸ್ ಡಬ್ಲ್ಯೂ ವಿಭಾಗದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಹಲವಾರು ರಾಷ್ಟೀಯ ಹಾಗೂ ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ತಮ್ಮ ವಿಚಾರ ಮತ್ತು ಲೇಖನಗಳನ್ನ ಮಂಡಿಸಿರುತ್ತಾರೆ. ಹಾಗು ರಾಷ್ಟೀಯ ಹಾಗೂ ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ ತಮ್ಮ ಲೇಖನವನ್ನ ಪ್ರಕಟಿಸಿರುತ್ತಾರೆ. ಎಂ ಎಸ್ ಡಬ್ಲ್ಯೂ ವಿಭಾಗದ ಪ್ರಾಧ್ಯಾಪಕ ಪ್ರೊ.ಪೌಲ್ ಜಿ. ಆಕ್ವೇನ್ಸ್ ಇವರ ಮಾರ್ಗದರ್ಶನದಲ್ಲಿ ಮಹಾ ಪ್ರಬಂಧವನ್ನು ಮಂಡಿಸಿದ್ದಾರೆ.