ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಭಾರತೀಯ ವಾಯುಸೇನೆಯ ಚೀತಾ ಹೆಲಿಕಾಪ್ಟರ್ ಪತನ..!: ಪೈಲಟ್‌ಗಳ ಪತ್ತೆಗಾಗಿ ಹುಡುಕಾಟ: ಸಾವಿನ ಕೂಪವಾಗಿ ಬದಲಾಯಿತೇ ಚೀತಾ ಹೆಲಿಕಾಪ್ಟರ್..?

ಭಾರತೀಯ ವಾಯುಸೇನೆಯ ಚೀತಾ ಹೆಲಿಕಾಪ್ಟರ್ ಪತನ..!: ಪೈಲಟ್‌ಗಳ ಪತ್ತೆಗಾಗಿ ಹುಡುಕಾಟ: ಸಾವಿನ ಕೂಪವಾಗಿ ಬದಲಾಯಿತೇ ಚೀತಾ ಹೆಲಿಕಾಪ್ಟರ್..?

ಅರುಣಾಚಲ ಪ್ರದೇಶ: ಬೊಮ್ಡಿಲಾ ಬಳಿ ಕಾರ್ಯಾಚರಣೆ ನಡೆಸುತ್ತಿದ್ದ ಭಾರತೀಯ ವಾಯುಸೇನೆಯ ಚೀತಾ ಹೆಲಿಕಾಪ್ಟರ್ ಮಾ.16ರಂದು ಪತನಗೊಂಡಿದೆ. ಸೇನೆಯ ಪ್ರಕಾರ, ಹೆಲಿಕಾಪ್ಟರ್ ಬೆಳಗ್ಗೆ 9:15ರ ಸುಮಾರಿಗೆ ಎಟಿಸಿ ಸಂಪರ್ಕ ಕಳೆದುಕೊಂಡಿದೆ. ಹಾಗು ಬೋಮ್ಡಿಲಾದ ಪಶ್ಚಿಮಕ್ಕೆ ಮಂಡಲಾ ಎಂಬ ಪ್ರದೇಶದ ಬಳಿ ಪತನಗೊಂಡಿದೆ ಎಂದು ವರದಿಯಾಗಿದೆ. ಈಗಾಗಲೆ ಪೈಲಟ್‌ಗಳ ಪತ್ತೆಗಾಗಿ ಹುಡುಕಾಟ ಪ್ರಾರಂಭಿಸಲಾಗಿದೆ.

ಭಾರತೀಯ ವಾಯುಪಡೆ ಮತ್ತು ಸೇನೆಯಲ್ಲಿ ಬಳಕೆಯಲ್ಲಿರುವ ಚೇತಕ್ ಮತ್ತು ಚೀತಾ ಹೆಲಿಕಾಪ್ಟರ್‌ಗಳು ಬಹಳ ಶಕ್ತಿಶಾಲಿ ಹಾಗೂ ಸಿಯಾಚಿನ್‌ನಂಥ ಆಯಕಟ್ಟಿನ ಎತ್ತರಕ್ಕೆ ಹೋಗಲು ಯಾವುದೇ ರಸ್ತೆಗಳಿಲ್ಲದ ಕಾರಣ ಇಂಥ ಸೇನಾ ನೆಲೆಗಳಲ್ಲಿ ಎತ್ತರದ ಕಾರ್ಯಾಚರಣೆಗಳಿಗೆ ಚೀತಾ ಹೆಲಿಕಾಪ್ಟರ್‌ಗಳನ್ನು ಬಳಸಲಾಗುತ್ತಿದೆ. ಈ ಪ್ರದೇಶಗಳಲ್ಲಿ ವೀಕ್ಷಣೆ, ಚೀತಾ ಹೆಲಿಕಾಫ್ಟರ್‌ಗಳು ಕಣ್ಗಾವಲು, ಲಾಜಿಸ್ಟಿಕ್ಸ್ ಮುಂತಾದ ಸೇವೆ ಸಲ್ಲಿಸುತ್ತಿದೆ.

ವಾಯುಪಡೆಯಲ್ಲಿ ಅನಿವಾರ್ಯವಾಗಿರುವ ಚೇತಕ್ ಮತ್ತು ಚೀತಾ ಹೆಲಿಕಾಪ್ಟರ್‌ಗಳು ಬಹಳ ಹಳೆಯವಾಗಿದ್ದು, ಇವನ್ನು ಬದಲಿಸುವ ಬೇಡಿಕೆ ಬಹಳ ದಿನದಿಂದ ಇದೆ. ಆದರೆ ಅತಿ ಎತ್ತರದ ಪ್ರದೇಶಗಳಲ್ಲಿ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿರುವ ಇವನ್ನು ಇನ್ನೂ ಸೇವೆಯಲ್ಲಿ ಮುಂದುವರಿಸಲಾಗಿದೆ. ಪ್ರಸ್ತುತ ಸುಮಾರು 200 ಚೀತಾ ಮತ್ತು ಚೇತಕ್ ಹೆಲಿಕಾಪ್ಟರ್‌ಗಳು ಸೇವೆಯಲ್ಲಿದ್ದು ಆರ್ಮಿ ಏವಿಯೇಷನ್ ಕಾರ್ಪ್ಸ್ ಮತ್ತು ಏರ್ ಫೋರ್ಸ್ ಚೀತಾ ಹೆಲಿಕಾಪ್ಟರ್‌ಗಳನ್ನು ನಿರ್ವಹಿಸುತ್ತವೆ. ಆದರೆ ಚೀತಾ ಹೆಲಿಕಾಪ್ಟರ್‌ಗಳು ವಾಸ್ತವಿಕವಾಗಿ ಸಾವಿನ ಕೂಪವಾಗಿ ಮಾರ್ಪಟ್ಟಿವೆ ಎಂದು ಸೇನಾ ಪ್ರಧಾನ ಕಚೇರಿ ಹೇಳಿತ್ತು. ಅದಕ್ಕೆ ಕಾರಣ ಈ ಹೆಲಿಕಾಪ್ಟರ್‌ಗಳು ಆಗಾಗ ಪತನವಾಗುತ್ತಿವೆ. ಕಳೆದ ಕೆಲ ವರ್ಷಗಳಲ್ಲಿ ಚೀತಾ ಹೆಲಿಕಾಪ್ಟರ್ ಒಳಗೊಂಡು 30 ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ ಮತ್ತು ಪೈಲಟ್‌ಗಳು ಸೇರಿದಂತೆ ಸುಮಾರು 40 ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಇನ್ನೂ ಹಲವರು ಗಾಯಗೊಂಡಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ್ ಪಾಟ್ನಿಟಾಪ್‌ನಲ್ಲಿ ನಡೆದ ಚೀತಾ ಹೆಲಿಕಾಪ್ಟರ್ ಅಪಘಾತದಲ್ಲಿ ಇಬ್ಬರು ಆರ್ಮಿ ಅಧಿಕಾರಿಗಳು ಸಾವನ್ನಪ್ಪಿದ್ದರು. ಫೆಬ್ರವರಿ 2020 ರಲ್ಲಿ ಜಮ್ಮುವಿನ ರೇಸಿ ಪ್ರದೇಶದಲ್ಲಿ ಚೀತಾ ಹೆಲಿಕಾಪ್ಟರ್ ಪತನವಾಗಿತ್ತು. ಆದರೆ ಇದರಲ್ಲಿ ಯಾವುದೇ ಸಾವು - ನೋವು ಸಂಭವಿಸಿರಲಿಲ್ಲ. ಹಾಗೆಯೇ 2019 ರಲ್ಲಿ ನಡೆದ ಮತ್ತೊಂದು ಅಪಘಾತದಲ್ಲಿ ಇಬ್ಬರು ಅಧಿಕಾರಿಗಳು ಮೃತಪಟ್ಟಿದ್ದರು. ಈಗ ಮತ್ತೊಂದು ಚೀತಾ ಹೆಲಿಕಾಪ್ಟರ್ ಪತನವಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!