ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಮಟ-ಮಟ ಮಧ್ಯಾಹ್ನ ಕುಸಿದ ಗುಡ್ಡ..!: ಮೂವರು ಕಾರ್ಮಿಕರು ಸಾವು..!:ಸುಳ್ಯ ತಾಲೂಕಿನ ಗುರುಪು ಬಳಿ ದುರ್ಘಟನೆ..

ಮಟ-ಮಟ ಮಧ್ಯಾಹ್ನ ಕುಸಿದ ಗುಡ್ಡ..!: ಮೂವರು ಕಾರ್ಮಿಕರು ಸಾವು..!:ಸುಳ್ಯ ತಾಲೂಕಿನ ಗುರುಪು ಬಳಿ ದುರ್ಘಟನೆ..

ಸುಳ್ಯ: ತಡೆಗೋಡೆ ಕಾಮಗಾರಿ ನಡೆಯುತ್ತಿದ್ದ ವೇಳೆ ಗುಡ್ಡ ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿದ ಘಟನೆ ಸುಳ್ಯ ತಾಲೂಕಿನ ಗುರುಂಪು ಬಳಿ ನಡೆದಿದೆ.

ಮಾ.25 ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ 7 ಮಂದಿ ಕಾರ್ಮಿಕರು ಗುರುಂಪು ಬಳಿ ಕೆಲಸ ಮಾಡುತ್ತಿದ್ದಾಗ ದೊಡ್ಡ ಗುಡ್ಡ ಕುಸಿದು ಕಾರ್ಮಿಕರ ಮೇಲೆ ಬಿದ್ದ ಪರಿಣಾಮ ಗದಗ ಜಿಲ್ಲೆಯ ಮುಂಡರಗಿಯ ಸೋಮಶೇಖರ ರೆಡ್ಡಿ(45) ಪತ್ನಿ ಶಾಂತಾ(40) ಹಾಗು ಮತ್ತೊರ್ವ ಪುರುಷ ಮೃತಪಟ್ಟಿದ್ದಾರೆ. ಇಬ್ಬರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು ಇನ್ನೊಬ್ಬರ ಮೃತ ದೇಹಕ್ಕಾಗಿ ಅಗ್ನಿಶಾಮಕದಳ ಮತ್ತು ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು ಘಟನಾ ಸ್ಥಳಕ್ಕೆ ಸಚಿವ ಎಸ್. ಅಂಗಾರ ಅವರು ಆಗಮಿಸಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!