Home › ಉದಯನಗರ ರಸ್ತೆ ಬಂದ್ ಮಾಡಿ ಸೇತುವೆ ಕಾಮಗಾರಿ: ಪರ್ಯಾಯ ರಸ್ತೆ ನಿರ್ಮಾಣಕ್ಕೆ ನಿರ್ಲಕ್ಷ್ಯ ತೋರಿದ ನ.ಪಂ ಸದಸ್ಯ: ಅಸಮಾಧಾನ ಹೊರಹಾಕಿ, ರಸ್ತೆ ನಿರ್ಮಿಸಿದ ಸ್ಥಳೀಯರು
ಉದಯನಗರ ರಸ್ತೆ ಬಂದ್ ಮಾಡಿ ಸೇತುವೆ ಕಾಮಗಾರಿ: ಪರ್ಯಾಯ ರಸ್ತೆ ನಿರ್ಮಾಣಕ್ಕೆ ನಿರ್ಲಕ್ಷ್ಯ ತೋರಿದ ನ.ಪಂ ಸದಸ್ಯ: ಅಸಮಾಧಾನ ಹೊರಹಾಕಿ, ರಸ್ತೆ ನಿರ್ಮಿಸಿದ ಸ್ಥಳೀಯರು
ONLINE PUDU / Friday, March 17, 2023
ಬೆಳ್ತಂಗಡಿ: ಪಟ್ಟಣ ಪಂಚಾಯತ್ ವ್ಯಾಪ್ತಿಯ 8 ನೇ ವಾರ್ಡಿನ ಬೆಳ್ತಂಗಡಿಯಿಂದ ಸುದೆಮುಗೇರು ಸಂಪರ್ಕಿಸುವ ರಸ್ತೆಯ ಉದಯನಗರದ ಚರ್ಚ್ ಬಳಿ ಹಳೇ ಸೇತುವೆ ಶಿಥಿಲಗೊಂಡಿದ್ದು ಇಲ್ಲಿಗೆ ನಗರಭಿವೃದ್ಧಿ ಅನುದಾನದಲ್ಲಿ ಹೊಸ ಸೇತುವೆ ನಿರ್ಮಾಣಕ್ಕಾಗಿ ರಸ್ತೆ ಬಂದ್ ಮಾಡಲಾಗಿದೆ.ಹಲವಾರು ಮನೆಗಳನ್ನು ಸಂಪರ್ಕಿಸುವ ರಸ್ತೆ ಇದಾಗಿದ್ದರಿಂದ ಸುಮಾರು 1 ತಿಂಗಳ ಕಾಲ ರಸ್ತೆಯಲ್ಲಿ ಸಂಚಾರಕ್ಕೆ ಸಮಸ್ಯೆಯಾಗಲಿದೆ.

ಹೀಗಾಗಿ ಪರ್ಯಾಯ ರಸ್ತೆ ನಿರ್ಮಾಣಕ್ಕೆ ಸ್ಥಳ ಇದ್ದು ಇಲ್ಲಿ ರಸ್ತೆ ನಿರ್ಮಿಸುವಂತೆ ಸ್ಥಳೀಯರು ಆ ವಾರ್ಡ್ ಸದಸ್ಯರಿಗೆ ಮನವಿ ಮಾಡಿದ್ದಾರೆ. ಆದರೆ ಇದಕ್ಕೆ ಕಿವಿಗೊಡದೇ ಅಲ್ಲಿರುವ ಹಳ್ಳಕ್ಕೆ ಅಡಿಕೆ ಮರವನ್ನು ಅಡ್ಡ ಹಾಕಿ ಅದರಲ್ಲಿ ಜನರು ದಾಟಿ ಹೋಗುವಂತೆ ಹಾಗೂ ಸಂಜಯ ನಗರದಿಂದಾಗಿ ಒಳ ರಸ್ತೆಯಲ್ಲಿ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆ.
ಇದರಿಂದ ಸ್ಥಳೀಯರು ಅಸಾಮಾಧಾನ ಹೊರಹಾಕಿದ್ದು ನಂತರ ಸ್ಥಳೀಯರು ಸ್ಥಳದಲ್ಲಿ ಸೇರಿ ಜೆಸಿಬಿ ಮೂಲಕ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಿದ್ದಾರೆ. ಶಾಲಾ ಮಕ್ಕಳಿಗೆ ಪರೀಕ್ಷೆ ಸಮಯವಾದ್ದರಿಂದ ತಾತ್ಕಲಿಕವಾಗಿ ರಸ್ತೆ ನಿರ್ಮಿಸಿದ್ದಾರೆ.