ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬೆಳ್ತಂಗಡಿ: ಬಿಜೆಪಿ ಮಹಾ ಸಂಪರ್ಕ ಅಭಿಯಾನ: 50 ಸಾವಿರಕ್ಕೂ ಅಧಿಕ ಮನೆ ಭೇಟಿ ಮಾಡಿದ ಕಾರ್ಯಕರ್ತರು..! :

ಬೆಳ್ತಂಗಡಿ: ಬಿಜೆಪಿ ಮಹಾ ಸಂಪರ್ಕ ಅಭಿಯಾನ: 50 ಸಾವಿರಕ್ಕೂ ಅಧಿಕ ಮನೆ ಭೇಟಿ ಮಾಡಿದ ಕಾರ್ಯಕರ್ತರು..! :

 

 

ಬೆಳ್ತಂಗಡಿ:  ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಅವರ ಪರವಾಗಿ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರು ಭಾನುವಾರ ತಾಲೂಕಿನ ಎಲ್ಲಾ 241 ಬೂತ್ ಗಳಲ್ಲಿ ನೂರಾರು ಸಂಖ್ಯೆಯಲ್ಲಿ ಮನೆ ಮನೆ ಪ್ರಚಾರ ಅಭಿಯಾನ ನಡೆಸಿದರು. ರಾಜ್ಯ ಬಿಜೆಪಿ ಸೂಚನೆಯಂತೆ ಭಾನುವಾರ ಎಲ್ಲ ಮುಖಂಡರು ಅವರ ಬೂತ್ ಗಳಲ್ಲೇ ಪ್ರಚಾರ ನಡೆಸಬೇಕು ಎಂಬ ಸೂಚನೆಯಂತೆ ಶಾಸಕ, ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಅವರ ಗರ್ಡಾಡಿ ಗ್ರಾಮದ ಬೂತ್ ಸಂಖ್ಯೆ 124 ರಲ್ಲಿ ಪ್ರಚಾರ ಕಾರ್ಯ ಕೈಗೊಂಡರು.

 

 

 

ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್ ಮರೋಡಿ ಗ್ರಾಮದಲ್ಲಿ, ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಉಜಿರೆ ಗ್ರಾಮದ ಬೂತ್, ಪ್ರಧಾನ ಕಾರ್ಯದರ್ಶಿ ಗಳಾದ ಶ್ರೀನಿವಾಸ ರಾವ್ ಧರ್ಮಸ್ಥಳ ಗ್ರಾಮದ ಬೂತ್, ಗಣೇಶ್ ಗೌಡ ನಾವೂರು ಗ್ರಾಮದ ಬೂತ್ ನಲ್ಲಿ ಮನೆ ಮನೆ ಪ್ರಚಾರ ನಡೆಸಿದರು.ಬೆಳ್ತಂಗಡಿ ಮಂಡಲದ 81 ಗ್ರಾಮಗಳ 241 ಬೂತ್ ಗಳಲ್ಲಿ ಮಹಾ ಸಂಪರ್ಕ ಅಭಿಯಾನವು ಒಂದೇ ದಿನ ಒಟ್ಟು ಸುಮಾರು 20 ಸಾವಿರ ಕಾರ್ಯಕರ್ತರು 50 ಸಾವಿರಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿ ಹರೀಶ್ ಪೂಂಜ ಪರವಾಗಿ ಮತಯಾಚನೆ ಮಾಡಿದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!