ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಪಟ್ರಮೆ ಸಂಶಯಾಸ್ಪದ ರೀತಿಯಲ್ಲಿ ಯುವತಿಯರಿಬ್ಬರು ಸಾವು: ತೀವ್ರ ಹೊಟ್ಟೆ ನೋವಿನಿಂದ ಬಳಲಿ ಸಾವನ್ನಪ್ಪಿದ ಗೆಳತಿಯರು: ಧರ್ಮಸ್ಥಳ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲು:

ಪಟ್ರಮೆ ಸಂಶಯಾಸ್ಪದ ರೀತಿಯಲ್ಲಿ ಯುವತಿಯರಿಬ್ಬರು ಸಾವು: ತೀವ್ರ ಹೊಟ್ಟೆ ನೋವಿನಿಂದ ಬಳಲಿ ಸಾವನ್ನಪ್ಪಿದ ಗೆಳತಿಯರು: ಧರ್ಮಸ್ಥಳ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲು:

 

 

 

ಬೆಳ್ತಂಗಡಿ: ಅಸಹಜ ರೀತಿಯಲ್ಲಿ ಯುವತಿಯರಿಬ್ಬರು ಸಾವನ್ನಪ್ಪಿದ ಘಟನೆ ಎ 06 ರಂದು ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ರಮೆಯಲ್ಲಿ ನಡೆದಿದೆ.

ತೀವ್ರ ಹೊಟ್ಟೆ ನೋವಿನಿಂದ ಬಳಲಿ ಪ್ರತ್ಯೇಕ ಆಸ್ಪತ್ರೆಯಲ್ಲಿ ಮೃತಪಟ್ಟ ಯುವತಿಯರನ್ನು ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಪಟ್ಟೂರಿನ ಬಾಬು ಹಾಗೂ ಗೀತ ದಂಪತಿಗಳ ಪುತ್ರಿ ರಕ್ಷಿತಾ (22) ಮತ್ತು ಆಕೆಯ ನೆರೆಮನೆಯ ಶ್ರೀನಿವಾಸ ಆಚಾರಿ ಹಾಗೂ ಪಾರ್ವತಿ ದಂಪತಿಗಳ ಪುತ್ರಿ ಲಾವಣ್ಯ (20) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಕೂಡ ಕಳೆದೊಂದು ವರ್ಷದಿಂದ ಅನಾರು ಹಾಗೂ ಮುಂಡೂರುಪಳಿಕೆ-ಉಪ್ಪಾರಪಳಿಕೆ ವಲಯದ ಸೇವಾ ನಿರತೆಯರಾಗಿ ಕಾರ್ಯನಿರ್ವಹಿಸುತ್ತಿದ್ದು, ಇಬ್ಬರು ಉತ್ತಮ ಸ್ನೇಹಿತೆಯಾಗಿದ್ದರು. ಆದಿತ್ಯವಾರ ರಕ್ಷಿತ ಹಾಗೂ ಲಾವಣ್ಯರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು ಮನೆಯವರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಏಪ್ರಿಲ್ 06 ರಂದು ಮೃತಪಟ್ಟಿದ್ದಾರೆ. ಹೊಟ್ಟೆನೋವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ವೈದ್ಯಕೀಯ ಪರೀಕ್ಷೆಯ ವರದಿ ನಂತರವೇ ಕಾರಣ ತಿಳಿದು ಬರಬೇಕಿದೆ. ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗೆಳತಿಯರಿಬ್ಬರು ಒಂದೇ ದಿನ ಹೊಟ್ಟೆ ನೋವಿನಿಂದ ಸಾವಿನಪ್ಪಿರುವ ಬಗ್ಗೆ ಸಾರ್ವಜನಿಕರಲ್ಲಿ ಸಂಶಯಕ್ಕೆ ಕಾರಣವಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!