ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ತಾಲೂಕಿನ ಅಭಿವೃದ್ದಿಯಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತಕ್ಕೆ ಅವಕಾಶವಿಲ್ಲ- ರಕ್ಷಿತ್ ಶಿವರಾಂ ಭರವಸೆ:

ತಾಲೂಕಿನ ಅಭಿವೃದ್ದಿಯಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತಕ್ಕೆ ಅವಕಾಶವಿಲ್ಲ- ರಕ್ಷಿತ್ ಶಿವರಾಂ ಭರವಸೆ:

 

 

 

ಬೆಳ್ತಂಗಡಿ:- ಅಭಿವೃದ್ಧಿ ಹೆಸರಿನಲ್ಲಿ ಪ್ರತಿಯೊಂದು ಕಾಮಗಾರಿಗಳಲ್ಲೂ ಭ್ರಷ್ಟಾಚಾರ ನಡೆದಿದೆ. ತಾಲೂಕಿನಲ್ಲಿ ಮಿತಿ ಮೀರಿ ಟಿಂಬರ್ ಮಾಫಿಯಾ, ಅಕ್ರಮ ಮರಳು ಗಣಿಗಾರಿಕೆಯಿಂದ ರಾಜ್ಯದಲ್ಲೇ ಕೆಟ್ಟ ಹೆಸರು ಪಡೆದಿದೆ. ನೇತ್ರಾವತಿಯ ಒಡಲನ್ನೇ ಬಗೆದು ತಿನ್ನುತ್ತಿದ್ದಾರೆ. ತಾಲೂಕಿನಲ್ಲಿ ಕುಡಿಯುವ ನೀರಿಗೂ ಅಭಾವ ಬಂದಿರುವುದಕ್ಕೆ ಅಕ್ರಮ ಮರಳುಗಣಿಗಾರಿಕೆಯೇ ಕಾರಣ ಎಂದು ವಾಗ್ದಾಳಿ ನಡೆಸಿದರು.

ಈ ಬಾರಿ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಬೇಕಾದ್ರೆ ಕಾಂಗ್ರೆಸ್ ಪಕ್ಷವನ್ನ ಗೆಲ್ಲಿಸಿ. ತಾಲೂಕಿನ ಅಭಿವೃದ್ಧಿಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ, ಸ್ವಜನಪಕ್ಷಪಾತಕ್ಕೆ ಒಳಗಾಗುವುದಿಲ್ಲ ಎಂದು ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಭರವಸೆ ನೀಡಿದರು.

ವಿಧಾನಸಭಾ ಕ್ಷೇತ್ರದ ಬೈಪಾಡಿ, ಪದ್ಮಂಜ, ಬಾರ್ಯ, ತೆಕ್ಕಾರು ,ಇಳಂತಿಲ ಮತ್ತು ಕರಾಯ ಸೇರಿದಂತೆ ಹಲವು ಕಡೆ ಮಾಜಿ ಶಾಸಕ ವಸಂತ ಬಂಗೇರ ಅವರೊಟ್ಟಿಗೆ ಬಿರುಸಿನ ಪ್ರಚಾರ ನಡೆಸಿದರು. ಇದೇ ವೇಳೆ ಮಾತನಾಡಿದ ಮಾಜಿ ಶಾಸಕ ವಸಂತ ಬಂಗೇರ ಅವರು, ಬೆಳ್ತಂಗಡಿಯ ಶಾಸಕರಿಗೆ ಕಮಿಷನ್ ಮಾತ್ರ ತಲೆಯಲ್ಲಿದೆ, ಅಭಿವೃದ್ಧಿಯಲ್ಲ.ಬಡವರಿಗೆ ನೀಡುವ ಅಕ್ರಮ-ಸಕ್ರಮದ ಹಕ್ಕುಪತ್ರದಲ್ಲೂ ಮಧ್ಯವರ್ತಿಗಳಿಂದ ವಸೂಲಿ ಮಾಡಿದ್ದಾರೆ.ಇಂತವರನ್ನು ಸೋಲಿಸಿ   ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು.

ಪ್ರಚಾರ ಸಭೆಯಲ್ಲಿ ರಕ್ಷಿತ್ ಶಿವರಾಂ ಪರ ಮತಯಾಚಿಸಿದ ಶ್ರೀ ಕ್ಷೇತ್ರ ಕುದ್ರೋಳಿ ಕೋಶಾಧಿಕಾರಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ರಾಮಯ್ಯ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುವುದು ನಿಶ್ಚಿತ. ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳು, ಐದು ಗ್ಯಾರಂಟಿಗಳ ಜನ ಸಾಮಾನ್ಯರ ಪರವಾಗಿದೆ ಅಂದರು ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಾಹುಲ್ ಹಮೀದ್ ,ಪಕ್ಷದ ಪ್ರಮುಖರಾದ ಜಯವಿಕ್ರಮ್ ,ಹರೀಶ್ ಗೌಡ, ಉಮವತಿ ಗೌಡ,ಅಬ್ದುಲ್ ರಝಾಕ್ ತೆಕ್ಕಾರು,ಅಯೂಬ್ ಡಿ.ಕೆ, ಈಶ್ವರ ಭಟ್ ಮಾಯ್ತಿಲೋಡಿ,ಶ್ರೀಮತಿ ಉಷಾ ಶರತ್ ,ಮನೋಹರ್ ಇಳಂತಿಲ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!