ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಪಟ್ರಮೆ ಗೆಳತಿಯರಿಬ್ಬರ ಅನುಮಾನಸ್ಪದ ಸಾವು ಪ್ರಕರಣ: ದೇಹದಲ್ಲಿ ವಿಷಕಾರಿ ರಾಸಾಯನಿಕ ಪದಾರ್ಥ ಪತ್ತೆ..!

ಪಟ್ರಮೆ ಗೆಳತಿಯರಿಬ್ಬರ ಅನುಮಾನಸ್ಪದ ಸಾವು ಪ್ರಕರಣ: ದೇಹದಲ್ಲಿ ವಿಷಕಾರಿ ರಾಸಾಯನಿಕ ಪದಾರ್ಥ ಪತ್ತೆ..!

 

 

ಬೆಳ್ತಂಗಡಿ:  ಅನುಮಾನಾಸ್ಪದವಾಗಿ ಸಾವಿಗೀಡಾದ ಪಟ್ರಮೆ ಗ್ರಾಮದ ಪಟ್ಟೂರಿನ ರಕ್ಷಿತಾ (22)ಹಾಗೂ ಲಾವಣ್ಯ(20) ರವರ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಯುವತಿಯರಿಬ್ಬರ ದೇಹದಲ್ಲಿ ವಿಷಕಾರಿ ರಾಸಾಯನಿಕ ಪದಾರ್ಥ ಪತ್ತೆಯಾಗಿದೆ. ಈ ಬಗ್ಗೆ ಬಲ್ಲಮೂಲಗಳಿಂದ ಮಾಹಿತಿ ದೊರೆತಿದ್ದು, ವಿಷಕಾರಿ ರಾಸಾಯನಿಕ ಪದಾರ್ಥ ಇವರಿಬ್ಬರ ದೇಹವನ್ನು ಹೇಗೆ ಸೇರಿಕೊಂಡಿದೆ ಎಂಬುದನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಫೊರೆನ್ಸಿಕ್ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದ್ದು ಅದರ ವರದಿ ಬಂದ ಮೇಲೆಯೇ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ಮೇಲ್ನೋಟಕ್ಕೆ ಯುವತಿಯರಿಬ್ಬರು ಇಲಿ ಪಾಷಾಣ ಅಥವಾ ರಾಸಾಯನಿಕ ಅಂಶ ಒಳಗೊಂಡಿರುವ ಆಹಾರ ಪದಾರ್ಥ ಸೇವಿಸಿರಬಹುದೇ ಎಂದು ಸಂಶಯ ವ್ಯಕ್ತವಾಗಿದೆ. ಪ್ರಕರಣವು ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಏಪ್ರಿಲ್ 6ರಂದು ಸ್ನೇಹಿತರಾಗಿದ್ದ ರಕ್ಷಿತಾ ಹಾಗೂ ಲಾವಣ್ಯ ತೀವ್ರ ಹೊಟ್ಟೆ ನೋವಿನಿಂದ ಬಳಲಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!