ಬೆಳ್ತಂಗಡಿ: ಲಾಯಿಲದ ವಿವಾಹಿತೆ ಮಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಲಾಯಿಲ ಹೊಸಕುಮೇರು ಎಂಬಲ್ಲಿಯ ನಿವಾಸಿ ರಾಮದಾಸ್ ಅವರ ಪುತ್ರಿ ಯಶಸ್ವಿನಿ ಅವರನ್ನು 3 ವರ್ಷಗಳ ಹಿಂದೆ ಮಂಗಳೂರಿನ ಯುವಕನಿಗೆ ಮದುವೆ ಮಾಡಿಕೊಡಲಾಗಿತ್ತು. ಅವರು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಕಾರಣ ಮಾತ್ರ ನಿಗೂಢವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.