ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಪೆರಲ್ದಾರ ಕಟ್ಟೆಯಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ಪ್ರಚಾರ ಸಭೆ: ಮನೆ-ಮನೆಗೆ ತೆರಳಿ ಮತಯಾಚನೆ

ಪೆರಲ್ದಾರ ಕಟ್ಟೆಯಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ಪ್ರಚಾರ ಸಭೆ: ಮನೆ-ಮನೆಗೆ ತೆರಳಿ ಮತಯಾಚನೆ

ಬೆಳ್ತಂಗಡಿ : ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಎಸ್‌ಡಿಪಿಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿಯವರು ಮೇ.05ರಂದು ಪೆರಲ್ದಾರ ಕಟ್ಟೆಯ ಮಂಜೊಟ್ಟಿಯಲ್ಲಿ ಪ್ರಚಾರ ಸಭೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅಭ್ಯರ್ಥಿ ಅಕ್ಬರ್ ಕಳೆದ 5 ವರ್ಷಗಳಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಆದ ಹಗರಣ, ಆಡಳಿತ ವಿರೋಧಿ ಕಾರ್ಯಗಳನ್ನು ಗಮನಿಸಿ ಜನತೆ ಎಸ್‌ಡಿಪಿಐ ಪಕ್ಷಕ್ಕೆ ಮತ ನೀಡಿ ಅತ್ಯಂತ ಅಧಿಕ ಮತಗಳ ಅಂತರದಿಂದ ಗೆಲ್ಲಿಸುವಂತೆ ವಿನಂತಿಸಿದರು.

ನವಾಝ್ ಕಟ್ಟೆ ಮಾತನಾಡಿ ‘ಬಿಜೆಪಿಯಿಂದ ಬೇಸತ್ತ ಜನತೆ ಎಸ್‌ಡಿಪಿಐ ಪಕ್ಷದ ಮೇಲೆ ಹೆಚ್ಚಿನ ಒಲವು ತೋರಿದ್ದಾರೆ. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲುವುದು ಖಚಿತ. ಎಸ್‌ಡಿಪಿಐ ಪಕ್ಷವು ಪ್ರಜಾಪ್ರಭುತ್ವದ ತಳಹದಿ ಮೆಲೆ ಕಾರ್ಯ ನಿರ್ವಹಿಸುತ್ತಿದೆ. ತ್ಯಾಗ, ಬಲಿದಾನಗಳ ತತ್ವ ಅಳವಡಿಸಿಕೊಂಡಿದೆ. ಜನಸಾಮಾನ್ಯರ ನೋವು, ನಲಿವುಗಳಿಗೆ ಸ್ಪಂದಿಸಿ ಜನರ ಜೀವನಮಟ್ಟ ಮೇಲೆತ್ತುವ ನಿಟ್ಟಿನಲ್ಲಿ ಅನೇಕ ಜನಪರ ಕೆಲಸ ಪಕ್ಷ ಮಾಡಿದೆ’ ಎಂದರು.

ಪೆರಲ್ದಾರ ಕಟ್ಟೆಯಲ್ಲಿ ಅಕ್ಬರ್ ಬೆಳ್ತಂಗಡಿ ಅವರು ಮನೆಗಳಿಗೆ ತೆರಳಿ ಮತಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಶ್ರಫ್ ಕಟ್ಟೆ, ಬಳಂಜ ಪಂಚಾಯತ್ ಸದಸ್ಯರಾದ ನಿಜಾಮ್ ಕಟ್ಟೆ, ತೆಂಕಕಾರಂದೂರು ಗ್ರಾಮ ಸಮಿತಿ ಪದಾಧಿಕಾರಿಗಳಾದ ಹಸನ್ ಗಿಂಡಾಡಿ, ನಿಯಾಝ್ ಕಟ್ಟೆ, ಅಶ್ರಫ್ ಬದ್ಯಾರು, ಬೂತ್ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು, ಹಿತೈಷಿಗಳು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!