ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಹಲಸಿನ ಹಣ್ಣು ಕೀಳಲು ಮರ ಹತ್ತಿದ ವ್ಯಕ್ತಿ ಬಿದ್ದು ಸಾವು.: ಕಾಶಿಬೆಟ್ಟು ಅರಳಿ ಬಳಿ ನಡೆದ ಘಟನೆ..:

ಹಲಸಿನ ಹಣ್ಣು ಕೀಳಲು ಮರ ಹತ್ತಿದ ವ್ಯಕ್ತಿ ಬಿದ್ದು ಸಾವು.: ಕಾಶಿಬೆಟ್ಟು ಅರಳಿ ಬಳಿ ನಡೆದ ಘಟನೆ..:

 

 

ಬೆಳ್ತಂಗಡಿ:  ಹಲಸಿನ ಹಣ್ಣು ಕೀಳಲು ಮರ ಹತ್ತಿದ ವ್ಯಕ್ತಿ ಮರದಿಂದ ಬಿದ್ದು ಸಾವನ್ನಪ್ಪಿದ ಘಟನೆ ಉಜಿರೆ ಗ್ರಾಮದ ಕಾಶಿಬೆಟ್ಟು ಸಮೀಪದ ಅರಳಿ ಎಂಬಲ್ಲಿ ಮೇ 28 ಬೆಳಿಗ್ಗೆ ನಡೆದಿದೆ. ಅರಳಿ ನಿವಾಸಿ ರಾಜೇಶ್ (45) ಎಂಬವರು ತನ್ನ ಅಕ್ಕನ ಮನೆಯಲ್ಲಿ ಹಲಸಿನ ಹಣ್ಣು ತೆಗೆಯಲೆಂದು ಮರ ಹತ್ತಿದ್ದು ಈ ಸಂದರ್ಭದಲ್ಲಿ ಮರಕ್ಕೆ ಇಟ್ಟಿದ್ದ ಏಣಿಯೊಂದಿಗೆ ಜಾರಿ ಬಿದ್ದು ಗಂಭೀರ ಗಾಯಗೊಂಡಿದ್ದು . ತಕ್ಷಣ ಅವರನ್ನು ಆಸ್ಪತ್ರೆಗೆ ಕೊಂಡುಹೋಗುವಷ್ಟರಲ್ಲೇ ಸಾವನ್ನಪ್ಪಿದ್ದಾರೆ ಎಂದು ಅವರ ಮನೆಯವರು ಮಾಹಿತಿ ನೀಡಿದ್ದಾರೆ. ಹಲಸಿನ ಮರದ ಸಮೀಪವೇ ವಿದ್ಯುತ್ ತಂತಿಯೂ ಹಾದು ಹೋಗಿದ್ದು ಅದೇನಾದರೂ ತಾಗಿ ಶಾಕ್ ಹೊಡೆದು ಅವಘಡ ಸಂಭವಿಸಿರಬಹುದೇ ಎಂದು ಇನ್ನಷ್ಟೆ ತಿಳಿದು ಬರಬೇಕಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!