ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಕಕ್ಕಿಂಜೆ, ಕ್ಷುಲ್ಲಕ ಕಾರಣ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ: ಗಂಭೀರ ಗಾಯಗೊಂಡ ವ್ಯಕ್ತಿ ಆಸ್ಪತ್ರೆಗೆ ದಾಖಲು: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು:

ಕಕ್ಕಿಂಜೆ, ಕ್ಷುಲ್ಲಕ ಕಾರಣ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ: ಗಂಭೀರ ಗಾಯಗೊಂಡ ವ್ಯಕ್ತಿ ಆಸ್ಪತ್ರೆಗೆ ದಾಖಲು: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು:

 

 

ಬೆಳ್ತಂಗಡಿ; ಕಕ್ಕಿಂಜೆಯ  ಚಿಬಿದ್ರೆ  ಗ್ರಾಮದ   ಕಲ್ಲಗುಡ್ಡೆ ಮನೆ ನಿವಾಸಿ ಸಂಜೀವ ಮಲೆಕುಡಿಯ ಎಂಬವರ ಮೇಲೆ ಕ್ಷುಲ್ಲಕ ಕಾರಣಕ್ಕೆ ಅವರ ಸಂಬಂಧಿಕರೇ ಆದ ಇಬ್ಬರು ಯುವಕರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ  ಸಂಭವಿಸಿದೆ. ಸಂಜೀವ ಮಲೆಕುಡಿಯ ಅವರ ಮನೆಯಲ್ಲಿದ್ದ ಅವರ ತಂಗಿಯ ಮಗಳಿಗೆ ಯಾವುದೋ ಕಾರಣಕ್ಕೆ ಬೈದಿದ್ದಾರೆ ಆಕೆ ಇದನ್ನು ತನ್ನ ಸಂಬಂಧಿಕರಾದ ಧರ್ಮಸ್ಥಳ ಗ್ರಾಮದ ನಿವಾಸಿಗಳಾದ ಹರಿಪ್ರಸಾದ್ ಮತ್ತು ನವೀನ್ ಎಂಬವರಿಗೆ ಹೇಳಿದ್ದಾರೆ. ಅವರು ನೇರವಾಗಿ ಸಂಜೀವ ಮಲೆಕುಡಿಯ ಅವರ ಮನೆಗೆ ಬಂದು ಅವರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಗೆ ಒಳಗಾದ ಸಂಜೀವ ಮಲೆಕುಡಿಯ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು ಕೈಕಾಲುಗಳಿಗೂ ಗಾಯಗಳಾಗಿವೆ ಮನೆಯವರು ಸಂಜೀವ ಮಲೆಕುಡಿಯ ಅವರನ್ನು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!