ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬಸ್ಸಿನಲ್ಲಿ ಕುಸಿದು ಬಿದ್ದು ,ಲಾಯಿಲ ನಿವಾಸಿ ಸಾವು :

ಬಸ್ಸಿನಲ್ಲಿ ಕುಸಿದು ಬಿದ್ದು ,ಲಾಯಿಲ ನಿವಾಸಿ ಸಾವು :

 

 

ಬೆಳ್ತಂಗಡಿ:ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗಲೇ ವ್ಯಕ್ತಿಯೊಬ್ಬರು ಹೃದಯಾಘತದಿಂದ  ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ  ಇಂದು ಸಂಜೆ ನಡೆದಿದೆ.ಮೃತ ವ್ಯಕ್ತಿಯನ್ನು ಲಾಯಿಲ ನಿವಾಸಿ ತಾಜ್ ಬಾವುಂಞಿ ( 57) ಎಂದು ಗುರುತಿಸಲಾಗಿದೆ.ಇವರು  ಕೆಲಸಕ್ಕೆಂದು ಬೆಳಗ್ಗೆ ಮಂಗಳೂರಿಗೆ ತೆರಳಿ ಸಂಜೆ ಮನೆಗೆ ಹಿಂದಿರುಗಿ ಬಸ್ಸಿನಲ್ಲಿ ಬರುತಿದ್ದು ಮಂಗಳೂರಿನ ಪಡೀಲ್ ಬಳಿ ಬಸ್ಸಿನಲ್ಲಿಯೇ ಕುಸಿದು ಬಿದಿದ್ದು ಕಂಡೆಕ್ಟರ್ ಸೇರಿದಂತೆ ಬಸ್ಸಲ್ಲಿದ್ದವರು ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಯ ಬಳಿ ಬಸ್ ನಿಲ್ಲಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕೊಂಡು ಹೋಗಿದ್ದಾರೆ. ಅದರೆ ಅಲ್ಲಿ ವೈದ್ಯರು ಪರೀಕ್ಷಿಸಿ ಅವರು ಮೃತ ಪಟ್ಟಿರುವ ಬಗ್ಗೆ ದೃಢಪಡಿಸಿದ್ದಾರೆ. ಅದಲ್ಲದೇ ಅದೇ ಬಸ್ಸಿನಲ್ಲಿ ಲಾಯಿಲದ ಅವರ ಪರಿಚಯದವರೊಬ್ಬರು ಇದ್ದು ಅವರು ತನ್ನ ಗಂಡನ ಮೂಲಕ ಮನೆಯವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮನೆಯವರು ತಕ್ಷಣ ಮಂಗಳೂರಿಗೆ ತೆರಳಿದ್ದಾರೆ.ಲಾಯಿಲನೂರುಲ್ ಹುದಾ ಎಜುಕೇಶನ್ ಅಂಡ್ ಚಾರ್ಟೆಬಲ್ ಟ್ರಸ್ಟ್ ಇದರ ಪ್ರಧಾನ ಕಾರ್ಯದರ್ಶಿಯಾಗಿ  ಕಾರ್ಯನಿರ್ವಹಿಸುತಿದ್ದ ಅವರು ಇಲೆಕ್ಟ್ರಿಷಿಯನ್ ವೃತ್ತಿಯಲ್ಲಿ ಜನಾನುರಾಗಿಯಾಗಿ ಕಳೆದ ನಲ್ವತ್ತು ವರ್ಷಗಳಿಂದ ವೃತ್ತಿ ಮಾಡುತ್ತಿದ್ದರು. ಮೃತರು ಪತ್ನಿ , ಮೂವರು ಹೆಣ್ಣುಮಕ್ಕಳನ್ನು  ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!