ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಮಾರ್ಗದ ವಿಚಾರದಲ್ಲಿ ಹೊಡೆದಾಟ, ಕತ್ತಿ ದೊಣ್ಣೆಯಿಂದ ಹಲ್ಲೆ : 7 ಮಂದಿ ಆಸ್ಪತ್ರೆಗೆ ದಾಖಲು: ನಡ ಗ್ರಾಮದ ದೆರ್ಲಕ್ಕಿ ಎಂಬಲ್ಲಿ ಘಟನೆ:

ಮಾರ್ಗದ ವಿಚಾರದಲ್ಲಿ ಹೊಡೆದಾಟ, ಕತ್ತಿ ದೊಣ್ಣೆಯಿಂದ ಹಲ್ಲೆ : 7 ಮಂದಿ ಆಸ್ಪತ್ರೆಗೆ ದಾಖಲು: ನಡ ಗ್ರಾಮದ ದೆರ್ಲಕ್ಕಿ ಎಂಬಲ್ಲಿ ಘಟನೆ:

 

ಬೆಳ್ತಂಗಡಿ: ನಡ ಗ್ರಾಮದ ದೇರ್ಲಕ್ಕಿಯ ಭೀಮಂಡೆ ಎಂಬಲ್ಲಿ ರಸ್ತೆ ವಿಚಾರಕ್ಜೆ ಸಂಬಂಧಪಟ್ಟಂತೆ ಕುಟುಂಬಸ್ಥರೇ   ಹೊಡೆದಾಡಿಕೊಂಡ ಘಟನೆ ಜೂನ್ 04 ಆದಿತ್ಯವಾರ ಬೆಳಿಗ್ಗೆ  ನಡೆದಿದೆ.ಮಾರ್ಗ ದುರಸ್ತಿ ಮಾಡುವ ವಿಚಾರವಾಗಿ ನಡೆದ ಗಲಾಟೆಯಲ್ಲಿ ಕತ್ತಿ ದೊಣ್ಣೆಯಿಂದ ಹೊಡೆದಾಡಿಕೊಂಡಿದ್ದು ಇತ್ತಂಡಗಳ 7 ಮಂದಿ ಬೆಳ್ತಂಗಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆಯ ವಿವರ:ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ದೆರ್ಲಕ್ಕಿ ಸಮೀಪದ ಭೀಮಂಡೆ ಎಂಬಲ್ಲಿ ಕಳೆದ ಹಲವಾರು ವರ್ಷಗಳಿಂದ ಮಾರ್ಗದ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಜಾಗದ ತಕರಾರು ಇದ್ದು ಇಂದು ಓಬಯ್ಯ ಗೌಡ ಹಾಗೂ ಅವರ ತಮ್ಮಂದಿರಾದ ಕೃಷ್ಣಪ್ಪ ಗೌಡ, ಕೇಶವ ಗೌಡ ,ಹಾಗೂ ಕೃಷ್ಣಪ್ಪ ಅವರ ಪತ್ನಿ ಭವಾನಿ  ಅವರು ಮನೆಗೆ ಹೋಗುವ ರಸ್ತೆ ದುರಸ್ತಿ ಮಾಡಲು ತೆರಳಿದ ಸಂದರ್ಭ ಅವರ ಸಂಬಂಧಿಕರಾದ ಪೂವಪ್ಪ ಗೌಡ, ಅವರ ಪತ್ನಿ ಲಲಿತ, ಹಾಗೂ  ಮಗ ವಿಜಯ ಇವರುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಎರಡು ಕಡೆಯವರು ಕತ್ತಿ ,ದೊಣ್ಣೆ, ಹಾರೆ ಕಲ್ಲುಗಳಿಂದ ಹಲ್ಲೆ ಮಾಡಿಕೊಂಡಿದ್ದಾರೆ. ಈ ವೇಳೆ ಕೃಷ್ಣಪ್ಪ ಗೌಡ (50) ಅವರಿಗೆ ಕೈಗೆ ಸೊಂಟಕ್ಕೆ , ಓಬಯ್ಯ ಗೌಡ (60) ಅವರಿಗೆ ತಲೆಗೆ ಕೈ ಮತ್ತು , ಬೆನ್ನಿಗೆ ಗಾಯ , ಕೇಶವ (47) ಅವರಿಗೆ ತಲೆಗೆ, ಭವಾನಿ(40)  ಅವರಿಗೆ ತಲೆ ಹಾಗೂ ಕೈಗೆ ಗಾಯಗಳಾಗಿದೆ.

ಇನ್ನೊಂದು ತಂಡದ ಪೂವಪ್ಪ ಗೌಡ (75) ಲಲಿತ (65) ವಿಜಯ (38) ಅವರಿಗೂ ಗಾಯಗಳಾಗಿದೆ. ಬೆಳ್ತಂಗಡಿ ಠಾಣೆಯ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!