ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಉರುಳಿಗೆ ಬಿದ್ದು ಚಿರತೆ ಸಾವು..!: ಮಂಗಳೂರಿನ ಮಿತ್ತಬೆಟ್ಟು ಬಳಿ ಘಟನೆ: ಐಕಳ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ

ಉರುಳಿಗೆ ಬಿದ್ದು ಚಿರತೆ ಸಾವು..!: ಮಂಗಳೂರಿನ ಮಿತ್ತಬೆಟ್ಟು ಬಳಿ ಘಟನೆ: ಐಕಳ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ

ಮಂಗಳೂರು : ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಸ್ಥಳೀಯರು ಹಾಕಿದ ಉರುಳಿಗೆ ಚಿರತೆ ಬಿದ್ದು ಸಾವನ್ನಪ್ಪಿದ ಘಟನೆೆ ಮಂಗಳೂರು ಹೊರವಲಯದ ಕಿನ್ನಿಗೋಳಿ ಬಳಿಯ ಮಿತ್ತಬೆಟ್ಟು ಎಂಬಲ್ಲಿ ನಡೆದಿದೆ.

ಮಿತ್ತಬೆಟ್ಟು ಸುತ್ತ-ಮುತ್ತ ಕಳೆದ ಕೆಲವು ತಿಂಗಳಿನಿಂದ ಚಿರತೆ ಹಾಗೂ ಇತರ ಕಾಡು ಪ್ರಾಣಿಗಳ ಕಾಟ ವಿಪರೀತವಾಗಿತ್ತು. ಸ್ಥಳೀಯರ ಅನೇಕ ಸಾಕು ನಾಯಿಗಳು ಚಿರತೆಗೆ ಆಹಾರವಾಗಿತ್ತು. ಇದರಿಂದ ಭಯಭೀತರಾದ ಸ್ಥಳೀಯರು ಕಾಡುಪ್ರಾಣಿಗಳ ಉಪಟಳ ಕಡಿಮೆಗೊಳಿಸಲು ಕಾಡಿನಲ್ಲಿ ಉರುಳು ಹಾಕಿದ್ದರು. ಈ ಉರುಳಿಗೆ ಕಳೆದ ರಾತ್ರಿ ಚಿರತೆ ಸಿಲುಕಿಕೊಂಡು ಇಂದು ಮುಂಜಾನೆ ಸಾವನ್ನಪ್ಪಿದೆ. ಘಟನಾ ಸ್ಥಳಕ್ಕೆ ಐಕಳ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!