ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬೆಳ್ತಂಗಡಿ: ಮತ್ತೆ ಮುಂದುವರಿದ ಕಳ್ಳರ ಕೈಚಳಕ..!: ಮಧ್ಯ ರಾತ್ರಿ ಬ್ಯಾಟರ್ ಅಂಗಡಿಗೆ ಕನ್ನ..!

ಬೆಳ್ತಂಗಡಿ: ಮತ್ತೆ ಮುಂದುವರಿದ ಕಳ್ಳರ ಕೈಚಳಕ..!: ಮಧ್ಯ ರಾತ್ರಿ ಬ್ಯಾಟರ್ ಅಂಗಡಿಗೆ ಕನ್ನ..!

ಬೆಳ್ತಂಗಡಿ : ಸಂತೆಕಟ್ಟೆಯ ಮಂಜುನಾಥ ಕಾಂಪ್ಲೆಕ್ಸ್ನಲ್ಲಿರುವ ಶೀತಲ್ ಜೈನ್ ಮಾಲೀಕತ್ವದ ಪವರ್ ಆನ್ ಬ್ಯಾಟರಿ ಅಂಗಡಿಗೆ ಜೂನ್.9 ರಂದು ಮಧ್ಯರಾತ್ರಿ ಕಳ್ಳರು ಒಳಗಿನುಗ್ಗಲು ಪ್ರಯತ್ನಿಸಿದ್ದಾರೆ.

ಶಟರ್‌ನ ಬೀಗ ಮುರಿದು ಗ್ಲಾಸ್ ಮುರಿಯಲು ಯತ್ನಿಸಿದ್ದು ಆದ್ರೆ ಒಳಹೋಗಲು ಸಾಧ್ಯವಾದೆ ಕೊನೆಗೆ ಬರಿಗೈಯಲ್ಲಿ ವಾಪಸ್ ಹೋಗಿದ್ದಾರೆ. ಇಂದು ಬೆಳಗ್ಗೆ ಜೂನ್.10 ರಂದು ಅಂಗಡಿ ತೆರೆಯಲು ಬಂದಾಗ ಕಳ್ಳತನ ಯತ್ನ ಪ್ರಕರಣ ಬೆಳಕಿಗೆ ಬಂದಿದೆ.

ಮಳೆ ಇದ್ದ ಕಾರಣ ಅಂಗಡಿಯಲ್ಲಿದ್ದ ಸಿಸಿ ಕ್ಯಾಮರ ಆಫ್ ಮಾಡಿ ಹೋಗಿದ್ದು ಹೀಗಾಗಿ ಕಳ್ಳರ ಬಗ್ಗೆ ಯಾವುದೇ ಕುರುಹು ಪತ್ತೆಯಾಗಿಲ್ಲ. ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ಮಾಲೀಕ ಶೀತಲ್ ಜೈನ್ ಮಾಹಿತಿ ನೀಡಿದ್ದಾರೆ.

ಕೆಲವು ತಿಂಗಳ ಹಿಂದೆ ನಿರಂತರವಾಗಿ ಮಧ್ಯರಾತ್ರಿ ಅಂಗಡಿಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಕಳ್ಳರು, ಸ್ವಲ್ಪ ದಿನ ಬಿಡುವು ಮಾಡಿಕೊಂಡು ಮತ್ತೆ ತಮ್ಮ ಕೈಚಳಕ ತೋರಿಸಲು ಮುಂದಾಗಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!