ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಸಿಬಿಐ ಕೋರ್ಟ್ ಶಾಕ್ ಬೆನ್ನಲ್ಲೇ ಧರ್ಮಸ್ಥಳ ಮಂಜುನಾಥನ ಸನ್ನಿಧಾನಕ್ಕೆ ಜನಾರ್ದನ ರೆಡ್ಡಿ ಕುಟುಂಬ ಆಗಮನ: ಶ್ರೀ ಕ್ಷೇತ್ರದಲ್ಲಿ ವಿಶೇಷ ಪೂಜೆ

ಸಿಬಿಐ ಕೋರ್ಟ್ ಶಾಕ್ ಬೆನ್ನಲ್ಲೇ ಧರ್ಮಸ್ಥಳ ಮಂಜುನಾಥನ ಸನ್ನಿಧಾನಕ್ಕೆ ಜನಾರ್ದನ ರೆಡ್ಡಿ ಕುಟುಂಬ ಆಗಮನ: ಶ್ರೀ ಕ್ಷೇತ್ರದಲ್ಲಿ ವಿಶೇಷ ಪೂಜೆ

ಬೆಳ್ತಂಗಡಿ : ಸಿಬಿಐ ವಿಶೇಷ ಕೋರ್ಟ್ ಪ್ರಕರಣ ಸಂಬಂಧದ ಆದೇಶದ ಬೆನ್ನಲ್ಲೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸ್ಥಾಪಕ ಜನಾರ್ದನ ರೆಡ್ಡಿ ಹಾಗೂ ಕುಟುಂಬ ಜೂನ್ 13 ರಂದು ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಪಡೆದಿದ್ದಾರೆ.

ಜನಾರ್ದನ ರೆಡ್ಡಿ , ಪತ್ನಿ ಅರುಣಾ ಲಕ್ಷ್ಮೀ , ಮಗಳು  ಬ್ರಹ್ಮಣಿ ರೆಡ್ಡಿ ,ಆಳಿಯ ರಾಜೀವ್ ಹಾಗೂ ಅವರ ಕುಟುಂಬದವರು ಜೂನ್ 12 ರಾತ್ರಿ ಧರ್ಮಸ್ಥಳ ಸನ್ನಿಧಿಯ ವಸತಿ ಗೃಹಕ್ಕೆ ಆಗಮಿಸಿದ್ದರು. ಇಂದು ಬೆಳಗ್ಗೆ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಸರ್ವ ಸೇವೆ ಪೂಜೆ ಸಲ್ಲಿಸಿದರು.

ಬಳಿಕ ಮಾಧ್ಯಮ ಜೊತೆ ಮಾತನಾಡಿದ ಅವರು ಕಳೆದ 6 ವರ್ಷಗಳಿಂದ ಮಂಜುನಾಥನ ದರ್ಶನ ಮಾಡಲು ಸಾಧ್ಯವಾಗಿಲ್ಲ. ಇಂದು ದರ್ಶನ ಪಡೆದಿದ್ದೇನೆ. ನಿನ್ನೆ ಸಿಬಿಐ ವಿಶೇಷ ಕೋರ್ಟ್ ಪ್ರಕರಣ ಸಂಬಂಧ ಆಸ್ತಿ ಪಾಸ್ತಿ ಮಾರಾಟ ಮಾಡದಂತೆ  ಕೋರ್ಟ್ ಆದೇಶ ಮಾಡಿದೆ. ಧರ್ಮಸ್ಥಳ ಮಂಜುನಾಥ ಧರ್ಮ ಮತ್ತು ನ್ಯಾಯವನ್ನು ಕೊಡುತ್ತಾನೆ. ಅವನು ದೇವರಾಗಿರುವ ಕಾರಣ ಅವನಿಂದ ಯಾವತ್ತು ನ್ಯಾಯನೇ ಸಿಗುತ್ತದೆ ಎಂದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!