ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ತೀರ್ಥ ಹಳ್ಳಿ ತುಂಗಾ ನದಿಯಲ್ಲಿ ಉಪನ್ಯಾಸಕರಿಬ್ಬರು ನೀರುಪಾಲು: ನೆರಿಯ ನಿವಾಸಿ  ನಾಪತ್ತೆ,ಮುಂದುವರಿದ ಶೋಧ ಕಾರ್ಯ..!

ತೀರ್ಥ ಹಳ್ಳಿ ತುಂಗಾ ನದಿಯಲ್ಲಿ ಉಪನ್ಯಾಸಕರಿಬ್ಬರು ನೀರುಪಾಲು: ನೆರಿಯ ನಿವಾಸಿ  ನಾಪತ್ತೆ,ಮುಂದುವರಿದ ಶೋಧ ಕಾರ್ಯ..!

 

 

ತೀರ್ಥಹಳ್ಳಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ನಿಟ್ಟೆಯ ಖಾಸಗಿ ಕಾಲೇಜಿನ ಇಬ್ಬರು ಉಪನ್ಯಾಸಕರು ನೀರುಪಾಲಾದ ಘಟನೆ ಇಂದು ನಡೆದಿದೆ.

ತೀರ್ಥಹಳ್ಳಿ ತಾಲೂಕು ತೀರ್ಥ ಮತ್ತೂರು ಗ್ರಾಮದ ಬಳಿ ತುಂಗಾ ನದಿಯಲ್ಲಿ ಘಟನೆ ಸಂಭವಿಸಿದೆ. ಕಾರ್ಕಳದ ನಿಟ್ಟೆ ಕಾಲೇಜಿನ ಉಪನ್ಯಾಸಕರಾದ ಪುನೀತ್‌ (38) ಮತ್ತು ಬಾಲಾಜಿ (36) ತುಂಗಾ ನದಿಯಲ್ಲಿ ಈಜಲು ತೆರಳಿದ್ದರು. ಈ ವೇಳೆ ಇಬ್ಬರು ನೀರಿನ ರಭಸಕ್ಕೆ ನಾಪತ್ತೆಯಾಗಿದ್ದಾರೆ. ಪುನೀತ್ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಬೋವಿನಡಿ ಎಂಬಲ್ಲಿಯ ನಿವಾಸಿಯಾಗಿದ್ದು ಇವರು ನಿಟ್ಟೆಯಲ್ಲಿ ಉಪನ್ಯಾಸಕರಾಗಿದ್ದರು.

ರಕ್ಷಣಾ ಕಾರ್ಯಾಚರಣೆ ವೇಳೆ ಒಬ್ಬರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!