Home › ಬೆಳ್ತಂಗಡಿಯಲ್ಲಿ ಗಾಳಿ-ಮಳೆ..!: ಮರ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿ
ಬೆಳ್ತಂಗಡಿಯಲ್ಲಿ ಗಾಳಿ-ಮಳೆ..!: ಮರ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿ
ONLINE PUDU / Saturday, June 10, 2023
ಬೆಳ್ತಂಗಡಿ: ಮರವೊಂದು ವಿದ್ಯುತ್ ಕಂಬದ ಮೇಲೆ ಬಿದ್ದ ಪರಿಣಾಮ ಕಂಬ ಮುರಿದು ಬಿದ್ದ ಘಟನೆ ಸವಣಾಲು ರಸ್ತೆಯ ಪುಲ್ತಡ್ಕ ಎಂಬಲ್ಲಿ ಜೂ 10 ರಂದು ನಡೆದಿದೆ.
ಇಂದು ಬೆಳಗ್ಗಿನಿಂದ ತಾಲೂಕಿನ ಹಲವೆಡೆಗಳಲ್ಲಿ ಮಳೆ ಸುರಿಯಲಾರಂಭಿಸಿದ್ದು ಕೆಲವು ಕಡೆಗಳಲ್ಲಿ ಗಾಳಿಯೂ ಜೋರಾಗಿತ್ತು. ಹೀಗಾಗಿ ಸವಣಾಲು ಹೋಗುವ ರಸ್ತೆಯ ಲಾಯಿಲ ಗ್ರಾಮದ ಪುಲ್ತಡ್ಕ ಎಂಬಲ್ಲಿ ಬೃಹತ್ ಮರವೊಂದು ವಿದ್ಯುತ್ ಕಂಬದ ಮೇಲೆ ಉರುಳಿ ಬಿದ್ದು ಪರಿಣಾಮ ಕಂಬ ಮುರಿದು ವಿದ್ಯುತ್ ತಂತಿಗಳು ತುಂಡಾಗಿ ರಸ್ತೆಗೆ ಬಿದ್ದಿದೆ.

ಈ ಬಗ್ಗೆ ಮಾಹಿತಿ ತಿಳಿದ ಮೆಸ್ಕಾಂ ಸಿಬ್ಬಂದಿ ಕಿಟ್ಟಣ ಸೇರಿದಂತೆ ಇತರರು ಮರವನ್ನು, ವಿದ್ಯುತ್ ತಂತಿಗಳನ್ನು ರಸ್ತೆಯಿಂದ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.