ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಹೆತ್ತ ಮಗನಿಂದಲೇ ಪೋಷಕರ ಹತ್ಯೆ..! ಮಂಗಳೂರು ಮೂಲದ ದಂಪತಿಯನ್ನು ಕೊಲೆಗೈದ ಮಗ..!

ಹೆತ್ತ ಮಗನಿಂದಲೇ ಪೋಷಕರ ಹತ್ಯೆ..! ಮಂಗಳೂರು ಮೂಲದ ದಂಪತಿಯನ್ನು ಕೊಲೆಗೈದ ಮಗ..!

ಬೆಂಗಳೂರು: ಮಗನಿಂದಲೇ ಪೋಷಕರು ದಾರುಣವಾಗಿ ಹತ್ಯೆಯಾದ ಘಟನೆ ಕೊಡಿಗೆಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಂಗಳೂರು ಮೂಲದ ಭಾಸ್ಕರ್ (61) ಹಾಗೂ ಶಾಂತಾ (60) ತಮ್ಮ ಇಬ್ಬರು ಗಂಡು ಮಕ್ಕಳ ಜೊತೆ ಬೆಂಗಳೂರಿನ ಕೊಡಿಗೆಹಳ್ಳಿ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದರು. ಶಾಂತಾ ಕೇಂದ್ರ ಸರ್ಕಾರಿ ಸೇವೆಯಲ್ಲಿ ಕರ್ತವ್ಯ ನಿರ್ವಹಿಸಿ ಇತ್ತೀಚೆಗೆ ನಿವೃತ್ತಿ ಹೊಂದಿದ್ದರು. ಭಾಸ್ಕರ್ ಅವರು ಕ್ಯಾಂಟೀನ್‌ವೊಂದರಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡಿಕೊಂಡಿದ್ದರು. ಹಿರಿಯ ಮಗ ಸಜಿತ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಕಿರಿಯ ಮಗ ಶರತ್ ಪೋಷಕರಿದ್ದ ಮನೆಯಲ್ಲಿಯೇ ಮೊದಲ ಮಹಡಿಯಲ್ಲಿ ಪ್ರತ್ಯೇಕ ರೂಂನಲ್ಲಿ ವಾಸವಿದ್ದ. ಜು.17ರಂದು ಸಂಜೆ ಕಿರಿಯ ಮಗ ಶರತ್ ಪೋಷಕರೊಂದಿಗೆ ಜಗಳವಾಡಿ ರಾತ್ರಿ ಸುಮಾರು 8 ರಿಂದ 9.30ರ ವೇಳೆಗೆ ಕಬ್ಬಿಣದ ರಾಡ್‌ನಿಂದ ತಂದೆ ಹಾಗೂ ತಾಯಿಯ ಮೇಲೆ ಹಲ್ಲೆ ಮಾಡಿ ಕೊಲೆಗೈದಿದ್ದಾನೆ. ಬಳಿಕ ಮನೆ ಬಾಗಿಲು ಲಾಕ್ ಮಾಡಿ ನಾಪತ್ತೆಯಾಗಿದ್ದಾನೆ.

ಹಿರಿಯ ಮಗ ಸಜಿತ್ ಕರೆ ಮಾಡಿದಾಗ ಪೋಷಕರು ಸ್ವೀಕರಿಸಿಲ್ಲ. ಹೀಗಾಗಿ ಪಕ್ಕದ ಮನೆಯವರ ನೆರವಿನಿಂದ ಪರಿಶೀಲಿಸಿದಾಗ ದಂಪತಿಯ ಕೊಲೆಯಾಗಿರುವುದು ತಿಳಿದುಬಂದಿದೆ. ಘಟನಾಸ್ಥಳದಲ್ಲಿ ಶ್ವಾನದಳ, ವಿಧಿ ವಿಜ್ಞಾನ ಪ್ರಯೋಗಾಲಯ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಶರತ್ ವರ್ತನೆ ವಿಚಿತ್ರವಾಗಿರುತ್ತಿತ್ತು ಎಂದು ಅಕ್ಕಪಕ್ಕದವರು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿ ಪ್ರಸಾದ್ ಅವರಿಗೆ ಮಾಹಿತಿ ನೀಡಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!