ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಶ್ರಮಿಕ" ಶ್ರಮಜೀವಿಗಳ ಬೆಳಕಾಗಿ ಮೂಡಿ ಬರಲಿ: ಹರಿಕೃಷ್ಣ ಬಂಟ್ವಾಳ ಬೆಳ್ತಂಗಡಿ ಶಾಸಕರ ಕಛೇರಿ "ಶ್ರಮಿಕ"ಕಾರ್ಯಾಲಯ ಉದ್ಘಾಟನೆ:

ಶ್ರಮಿಕ" ಶ್ರಮಜೀವಿಗಳ ಬೆಳಕಾಗಿ ಮೂಡಿ ಬರಲಿ: ಹರಿಕೃಷ್ಣ ಬಂಟ್ವಾಳ ಬೆಳ್ತಂಗಡಿ ಶಾಸಕರ ಕಛೇರಿ "ಶ್ರಮಿಕ"ಕಾರ್ಯಾಲಯ ಉದ್ಘಾಟನೆ:

 

 

 

ಬೆಳ್ತಂಗಡಿ: ಸರಕಾರದ ವಿವಿಧ ಯೋಜನೆಗಳನ್ನು ತಾಲೂಕಿನ ಜನರಿಗೆ ಪ್ರಾಮಾಣಿಕವಾಗಿ  ಮುಟ್ಟಿಸುವುದಲ್ಲದೇ ಜನರ ಬೇಡಿಕೆ ಆಶೋತ್ತರಗಳನ್ನು ಬಗೆಹರಿಸುವ ಶ್ರಮಿಕ ಕಛೇರಿ ಶ್ರಮಜೀವಿ ಜನರ ಬಾಳಲ್ಲಿ ಬೆಳಕಾಗಿ ಮೂಡಿಬರಲಿ ಎಂದು ಬಿಜೆಪಿ ಪ್ರಭಾರಿ ಹರಿಕೃಷ್ಣ ಬಂಟ್ವಾಳ ಹೇಳಿದರು. ಅವರು ಬೆಳ್ತಂಗಡಿಯ ಶಾಸಕರ ಕಛೇರಿ "ಶ್ರಮಿಕ" ಕಾರ್ಯಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು. ಕಳೆದ ಅವಧಿಯಲ್ಲಿ ಬೆಳ್ತಂಗಡಿಯಲ್ಲಿ ಶಾಸಕ ಹರೀಶ್ ಪೂಂಜ ಮಾಡಿದ ಅಭೂತಪೂರ್ವ ಅಭಿವೃದ್ಧಿಯಿಂದಾಗಿ ಹದಿನೆಂಟು ಸಾವಿರಕ್ಕಿಂತಲೂ ಅಧಿಕ ಮತಗಳಿಂದ ಎರಡನೇ ಬಾರಿಗೆ  ಗೆದ್ದು ಬಂದು ನಮ್ಮ ಕರಾವಳಿಗೆ ಯುವಶಕ್ತಿಯಾಗಿ ಅವರು ಮೂಡಿ ಬಂದಿದ್ದಾರೆ   ತಾಲೂಕಿನ ಪ್ರತಿ ಮನೆಗಳ ಮನೆ ಮಗನಾಗಿ ಬೆಳೆದು ಪ್ರತಿಯೊಬ್ಬರ ನೋವುಗಳಿಗೆ ಸ್ಪಂದಿಸಿ   ಇಡೀ ರಾಜ್ಯದಲ್ಲೇ ಬೆಳ್ತಂಗಡಿ ತಾಲೂಕನ್ನು ಮಾದರಿಯನ್ನಾಗಿಸಿರುವ ಶಾಸಕ ಹರೀಶ್ ಪೂಂಜ ಮತ್ತೊಮ್ಮೆ ತಾಲೂಕಿನ ಶಾಸಕರಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯಾಗಿದೆ.ಮುಂದಿನ ದಿನಗಳಲ್ಲೂ ಇನ್ನಷ್ಟೂ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಅವರ ಯೋಜನೆ ಯೋಚನೆಗಳನ್ನು ಈಡೇರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಶುಭ ಕೋರಿದರು.  ಮಾಜಿ ಶಾಸಕ ಪ್ರಭಾಕರ ಬಂಗೇರ ಕಛೇರಿಯನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಪ್ರಮುಖರಾದ ಕೊರಗಪ್ಪ ನಾಯ್ಕ, ಕುಶಾಲಪ್ಪ ಗೌಡ, ಜಯಂತ ಗೌಡ, ಚೆನ್ನಕೇಶವ, ಬಾಲಕೃಷ್ಣ ಶೆಟ್ಟಿ ಸವಣಾಲು, ಪ್ರಶಾಂತ್ ಪಾರೆಂಕಿ, ಗಣೇಶ್ ಗೌಡ ನಾವೂರು, ಸೀತಾರಾಮ್ ಬೆಳಾಲ್, ಸೇರಿದಂತೆ ಪಂಚಾಯತ್ ಅಧ್ಯಕ್ಷರುಗಳು, ಸದಸ್ಯರುಗಳು ಇನ್ನಿತರ ಮುಖಂಡರುಗಳು ಉಪಸ್ಥಿತರಿದ್ದರು. ಬಂದಂತಹ ಅತಿಥಿಗಳನ್ನು ಹಾಗೂ ಹಿತೈಷಿಗಳನ್ನು ಶಾಸಕ ಹರೀಶ್ ಪೂಂಜ ಸ್ವಾಗತಿಸಿ ಆತ್ಮೀಯವಾಗಿ ಬರಮಾಡಿಕೊಂಡರು.  ಬೆಳ್ತಂಗಡಿ ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!