ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಉಯ್ಯಾಲೆಯಿಂದ ಬಿದ್ದು ಬಾಲಕ ದಾರುಣ ಸಾವು: ದಿಡುಪೆಯಲ್ಲಿ ನಡೆಯಿತು ದುರಂತ ಘಟನೆ:

ಉಯ್ಯಾಲೆಯಿಂದ ಬಿದ್ದು ಬಾಲಕ ದಾರುಣ ಸಾವು: ದಿಡುಪೆಯಲ್ಲಿ ನಡೆಯಿತು ದುರಂತ ಘಟನೆ:

 

 

 

ಬೆಳ್ತಂಗಡಿ: ಉಯ್ಯಾಲೆಯಲ್ಲಿ ಆಡುತ್ತಿರುವ ವೇಳೆ ಆಕಸ್ಮಿಕವಾಗಿ  ಬಿದ್ದ ಪರಿಣಾಮ ಬಾಲಕನೊಬ್ಬ ಸಾವನ್ನಪ್ಪಿದ ಘಟನೆ ದಿಡುಪೆ ಬಳಿ ಜು 16 ರಂದು ಸಂಜೆ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಮಂಟಮೆ ನಿವಾಸಿ ಬಾಲಕೃಷ್ಣ ಎಂಬವರ ಮಗ 8 ನೇ ತರಗತಿ ವಿದ್ಯಾರ್ಥಿ ಶ್ರೀಷಾ (13) ಮನೆಯ ಸಮೀಪ ಮರಕ್ಕೆ ಕಟ್ಟಿದ ಸೀರೆಯ  ಉಯ್ಯಾಲೆಯಲ್ಲಿ ಆಡುತ್ತಿದ್ದಾಗ ಆಕಸ್ಮಿಕವಾಗಿ  ನೆಲಕ್ಕೆ ಬಿದ್ದಿದ್ದು  ಗಂಭೀರ ಸ್ಥಿತಿಯಲ್ಲಿದ್ದ ಬಾಲಕನನ್ನು  ತಕ್ಷಣ   ಉಜಿರೆ ಖಾಸಗಿ ಆಸ್ಪತ್ರೆಗೆ ಸಾಗಿಸುವ ವೇಳೆ  ಸಾವನ್ನಪ್ಪಿರುವ ಬಗ್ಗೆ ತಿಳಿದು ಬಂದಿದೆ.

ಬಾಲಕನ ಶವವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!