Home › ಬಸ್ಸಿನಲ್ಲಿ ಯುವತಿಯೊಂದಿಗೆ ಅಸಭ್ಯ ವರ್ತನೆ : ಮಿತ್ತಬಾಗಿಲು ಗ್ರಾ.ಪಂ ಸದಸ್ಯನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಯುವಕರು:
ಬಸ್ಸಿನಲ್ಲಿ ಯುವತಿಯೊಂದಿಗೆ ಅಸಭ್ಯ ವರ್ತನೆ : ಮಿತ್ತಬಾಗಿಲು ಗ್ರಾ.ಪಂ ಸದಸ್ಯನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಯುವಕರು:
ONLINE PUDU / Saturday, July 29, 2023
ಬೆಳ್ತಂಗಡಿ: ಯುವತಿಯೊಂದಿಗೆ ಬಸ್ಸಿನಲ್ಲಿ ಅಸಭ್ಯವಾಗಿ ವರ್ತಿಸಿದ ಗ್ರಾ.ಪಂ ಸದಸ್ಯನನ್ನು ಪೊಲೀಸರಿಗೊಪ್ಪಿಸಿದ ಘಟನೆ ಉಜಿರೆಯಲ್ಲಿ ಜು 29 ರಂದು ಸಂಜೆ ನಡೆದಿದೆ.
ಮೂಡಿಗೆರೆಯ ಯುವತಿಯೊಬ್ಬಳು ಮಂಗಳೂರಿನಿಂದ ತನ್ನ ಮನೆ ಮೂಡಿಗೆರೆಗೆ ಕೆಎಸ್ ಆರ್ ಟಿಸಿ ಬಸ್ಸಿನಲ್ಲಿ ಬರುತಿದ್ದ ವೇಳೆ ಯುವತಿಯ ಪಕ್ಕದಲ್ಲೇ ಬಂದು ಕುಳಿತ ಮಿತ್ತಬಾಗಿಲಿನ ಗ್ರಾ. ಪಂ ಸದಸ್ಯ ಕಬೀರ್ ಎಂಬಾತ ಬಸ್ ಮಡಂತ್ಯಾರು ಸಮೀಪ ಬರುತಿದ್ದಂತೆ ಮೈ ಮುಟ್ಟಿ ಅವಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಯುವತಿ ವಿರೋಧ ವ್ಯಕ್ತಪಡಿಸಿದರೂ ತನ್ನ ಚಾಳಿಯನ್ನು ಮುಂದುವರಿಸಿದ್ದಾನೆ. ಈ ವೇಳೆ ಯುವತಿ ತಂದೆ ಹಾಗೂ ಉಜಿರೆಯ ತನ್ನ ಪರಿಚಯಸ್ಥ ಯುವಕರಿಗೆ ವಿಷಯ ತಿಳಿಸಿದ್ದಾಳೆ. ಬಸ್ ಉಜಿರೆ ಬರುತಿದ್ದಂತೆ ಯುವಕರು ಆರೋಪಿ ಕಬೀರ್ ಅವನನ್ನು ಬಸ್ಸಿನಿಂದ ಇಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ಯುವತಿಯ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.