ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ನೆರಿಯ ಗ್ರಾಮದಲ್ಲಿ, ಸ್ಮಶಾನದ ಬೇಡಿಕೆಗಾಗಿ ಗ್ರಾಮಸ್ಥರ ಪ್ರತಿಭಟನೆ: ಮೃತ ದೇಹ ಪಂಚಾಯತ್ ಎದುರು ಇಟ್ಟು ಪ್ರತಿಭಟನೆಗೆ ಸಿದ್ಧತೆ: ಬೇಡಿಕೆ ಈಡೇರದಿದ್ದಲ್ಲಿ ಪಂಚಾಯತ್ ಎದುರು ಅಂತ್ಯ ಸಂಸ್ಕಾರ ಮಾಡುವ ಎಚ್ಚರಿಕೆ:

ನೆರಿಯ ಗ್ರಾಮದಲ್ಲಿ, ಸ್ಮಶಾನದ ಬೇಡಿಕೆಗಾಗಿ ಗ್ರಾಮಸ್ಥರ ಪ್ರತಿಭಟನೆ: ಮೃತ ದೇಹ ಪಂಚಾಯತ್ ಎದುರು ಇಟ್ಟು ಪ್ರತಿಭಟನೆಗೆ ಸಿದ್ಧತೆ: ಬೇಡಿಕೆ ಈಡೇರದಿದ್ದಲ್ಲಿ ಪಂಚಾಯತ್ ಎದುರು ಅಂತ್ಯ ಸಂಸ್ಕಾರ ಮಾಡುವ ಎಚ್ಚರಿಕೆ:

 

 

 

 

ಬೆಳ್ತಂಗಡಿ: ತಾಲೂಕಿನ ನೆರಿಯ ಗ್ರಾಮದಲ್ಲಿ ಸ್ಮಶಾನ ಇಲ್ಲದಿರುವುದರಿಂದ ಮೃತರ ಅಂತ್ಯ ಸಂಸ್ಕಾರಕ್ಕೆ ತೊಂದರೆಯಾಗುತಿದ್ದು ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯತ್ ಎದುರು ಮೃತ ದೇಹವನ್ನು ಇಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದಾರೆ.‌ಕಳೆದ ಹಲವಾರು ವರ್ಷಗಳಿಂದ ಸ್ಮಶಾನಕ್ಕಾಗಿ ಸ್ಥಳ ಮಂಜೂರುಗೊಳಿಸುವಂತೆ ಹಲವಾರೂ ಗ್ರಾಮ ಸಭೆಗಳಲ್ಲಿ ಬೇಡಿಕೆ ಇಟ್ಟರೂ ಯಾರು ಕೂಡ ಗ್ರಾಮಸ್ಥರ ಮನವಿಗೆ ಸ್ಪಂದನೆ ಸಿಗುತ್ತಿಲ್ಲ ಎಂದು ನೆರಿಯದಲ್ಲಿ ಪ್ರತಿಭಟನೆ ನಡೆಸುತಿದ್ದಾರೆ.

ಜು 14 ರಂದು ಜನತಾ ಕಾಲನಿ ನಿವಾಸಿಯೊಬ್ಬರು ಮೃತಪಟ್ಟಿದ್ದು ಅವರ ಮೃತ ದೇಹವನ್ನು ಪಂಚಾಯತ್ ಎದುರು ಇಟ್ಟು ಪ್ರತಿಭಟನೆಗೆ ಊರವರು ಮುಂದಾಗಿದ್ದಾರೆ. ಒಂದು ವೇಳೆ ಸ್ಪಂದನೆ ಸಿಗದಿದ್ದಲ್ಲಿ ಅವರ ಅಂತ್ಯ ಸಂಸ್ಕಾರವನ್ನು ನೆರಿಯ ಗ್ರಾಮ ಪಂಚಾಯತ್ ಎದುರೇ ಮಾಡುತ್ತೇವೆ ಎಂಬ ಎಚ್ಚರಿಕೆಯನ್ನು ಗ್ರಾಮಸ್ಥರು ನೀಡಿದ್ದಾರೆ.ಮೃತರ ಮನೆಗೆ ಗ್ರಾಮ ಪಂಚಾಯತ್ ಅಧ್ಯಕ್ಷರು ಅಧಿಕಾರಿಗಳು ಬಂದು ಗ್ರಾಮಸ್ಥರ ಮನವೊಲಿಸಿದರೂ ಇಷ್ಟು ವರ್ಷ ಬೇಡಿಕೆ ಈಡೇರಿಲ್ಲ ಸ್ಮಶಾನ ಆಗುವ ತನಕ ಪಂಚಾಯತ್ ಗೆ ಬೀಗ ಹಾಕಿ ಎಂದು ತರಾಟೆಗೆ ತಗೊಂಡಿದ್ದಾರೆ.ಸ್ಥಳಕ್ಕೆ ತಹಶೀಲ್ದಾರ್ ಬಂದ್ದು ನಮಗೆ ಜಾಗ ಇವತ್ತೇ ನಿಗದಿ ಪಡಿಸಬೇಕು ಒಂದು ವೇಳೆ ಇವತ್ತೂ ಕೂಡ ನಮ್ಮ ಬೇಡಿಕೆ ಈಡೇರದಿದ್ದಲ್ಲಿ ಪಂಚಾಯತ್ ಎದುರು ಅಂತ್ಯ ಸಂಸ್ಕಾರವನ್ನು ಮಾಡುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!