ಬೆಳ್ತಂಗಡಿ: ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘ (ರಿ) ಬೆಳ್ತಂಗಡಿ ತಾಲೂಕು ಸಮಿತಿಯ ರಚನೆ ಹಾಗೂ ಸಮಾಲೋಚನಾ ಸಭೆಯು ದ.ಕ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಬೆಳ್ತಂಗಡಿಯ ಶ್ರೀ ಗುರುನಾರಾಯಣ ಸಭಾಭವನದಲ್ಲಿ ಜು 02 ಆದಿತ್ಯವಾರ ನಡೆಯಿತು. ತಾಲೂಕು ಸಮಿತಿ ಬೆಳ್ತಂಗಡಿಯ ಗೌರವಾಧ್ಯಕ್ಷರಾಗಿ ಸಂದೀಪ್ ಎಸ್ ನೀರಲ್ಕೆ ಅರ್ವ ಅಧ್ಯಕ್ಷರಾಗಿ-ಹರೀಶ್ ಪ್ರಧಾನ ಕಾರ್ಯದರ್ಶಿಯಾಗಿ-ಜಯಂತಿ ಜೊತೆ ಕಾರ್ಯದರ್ಶಿಯಾಗಿ-ಜಯಶ್ರೀ ಕೋಶಾಧಿಕಾರಿಯಾಗಿ-ವೇಧಾವತಿ ಸಂಚಾಲಕರಾಗಿ-ಸವಿತಾ ನಾಮನಿರ್ದೇಶಿತರಾಗಿ-ಆಶಾ,ನವ್ಯ,ಶಶಿಕಲಾ, ಸುಷ್ಮಾ ಆಯ್ಕೆಯಾದರು. ಸಭೆಯಲ್ಲಿ ಜಿಲ್ಲಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ಚಂದ್ರಿಕಾ, ಪ್ರಧಾನ ಕಾರ್ಯದರ್ಶಿ ದಯಾಮಣಿ, ಬೆಳ್ತಂಗಡಿ ತಾಲೂಕಿನ ಅತಿಥಿ ಶಿಕ್ಷಕರು, ಪೂರ್ವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು