ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬೆಳ್ತಂಗಡಿ: ಟೆಲಿಗ್ರಾಂ ಆ್ಯಪ್‌ನ ನಕಲಿ ಖಾತೆಯ ಮೂಲಕ ಶಿಕ್ಷಕಿಗೆ ಮೆಸೆಜ್: 3 ಲಕ್ಷಕ್ಕೆ ಡಿಮ್ಯಾಂಡ್ : ಹಣ ಪಡೆಯಲು ಭರ್ಜರಿ ಪ್ಲಾನ್ : ಖತರ್‌ನಾಕ್ ವಂಚಕನನ್ನು ಪತ್ತೆಹಚ್ಚಲು ವೇಣೂರು ಪೊಲೀಸರಿಂದ ಮಾಸ್ಟರ್ ಪ್ಲಾನ್..!

ಬೆಳ್ತಂಗಡಿ: ಟೆಲಿಗ್ರಾಂ ಆ್ಯಪ್‌ನ ನಕಲಿ ಖಾತೆಯ ಮೂಲಕ ಶಿಕ್ಷಕಿಗೆ ಮೆಸೆಜ್: 3 ಲಕ್ಷಕ್ಕೆ ಡಿಮ್ಯಾಂಡ್ : ಹಣ ಪಡೆಯಲು ಭರ್ಜರಿ ಪ್ಲಾನ್ : ಖತರ್‌ನಾಕ್ ವಂಚಕನನ್ನು ಪತ್ತೆಹಚ್ಚಲು ವೇಣೂರು ಪೊಲೀಸರಿಂದ ಮಾಸ್ಟರ್ ಪ್ಲಾನ್..!

ಬೆಳ್ತಂಗಡಿ : ಟೆಲಿಗ್ರಾಂ ಆ್ಯಪ್‌ನ ನಕಲಿ ಖಾತೆಯ ಮೂಲಕ ಸಂದೇಶ ಕಳುಹಿಸಿ 1 ಲಕ್ಷ ಹಣವನ್ನು ವಸೂಲಿಗೈದಿದ್ದ ವಂಚಕನನ್ನು ವೇಣೂರು ಪೊಲೀಸರು ಕಾರ್ಯಾಚರಣೆ ನಡೆಸಿ ಪತ್ತೆಹಚ್ಚಿದ್ದಾರೆ.

ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಗ್ರಾಮದ ನಿವಾಸಿ, ಪೆರೋಡಿತ್ತಾಯಕಟ್ಟೆ ಶಾಲೆಯ ಶಿಕ್ಷಕಿಯೋರ್ವರಿಗೆ ಅವರಿಗೆ ನಕಲಿ ಟೆಲಿಗ್ರಾಂ ಖಾತೆಯ ಮೂಲಕ 3 ಲಕ್ಷ ರೂ. ಕೊಡುವಂತೆ ಬೇಡಿಕೆ ಇಟ್ಟು ಹಣವನ್ನು ನೀಡದಿದ್ದರೆ ಗಂಡನನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಈ ಬಗ್ಗೆ ಶಿಕ್ಷಕಿ ಅವರು ವೇಣೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದರು. ಕಾರ್ಯಾಚರಣೆಗಿಳಿದ ವೇಣೂರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕಿ ಸೌಮ್ಯ ಜೆ., ಆನಂದ ಎಂ ಹಾಗೂ ತಂಡದವರಿಗೆ ಆರೋಪಿ ಸುಲ್ಕೇರಿ ಗ್ರಾಮದ ಅಂಟ್ರಿಂಜ ನಿವಾಸಿ ಅಶ್ವತ್ ಹೆಬ್ಬಾರ್ (23) ಎಂದು ತಿಳಿದು ಬಂದಿದೆ. ಆ. 02ರ ಮಧ್ಯರಾತ್ರಿ ತೆಂಕಕಾರಂದೂರು ಗ್ರಾಮದ ಗುಂಡೇರಿ ಎಂಬಲ್ಲಿ ಆರೋಪಿಯನ್ನು ಸೆರೆಹಿಡಿದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಶಿಕ್ಷಕಿಯಿಂದ ಹಣ ಪಡೆಯಲು ಭರ್ಜರಿ ಪ್ಲಾನ್ : ಖಾಕಿಗೆ ಸಿಕ್ಕಿಬಿದ್ದ ಖತರ್ ನಾಕ್..!

3 ಲಕ್ಷ ಹಣ ನೀಡುವಂತೆ ಬೆದರಿಕೆ ಹಾಕಿದ ಆರೋಪಿಗೆ ಶಿಕ್ಷಕಿ ಒಂದು ಲಕ್ಷ ನೀಡುವುದಾಗಿ ಒಪ್ಪಿಸಿದ್ದರು. ಇದಕ್ಕೆ ಒಪ್ಪಿದ ಆರೋಪಿ ಆ.02ರಂದು ಸಂಜೆ ಅಳದಂಗಡಿ ಕೆದ್ದು ಸಮೀಪ ಹಣವನ್ನು ಎಸೆದು ಹೋಗುವಂತೆ ಸೂಚಿಸಿದ್ದ. ಬಳಿಕ ಅಲ್ಲಿ ಎಸೆಯಬೇಡಿ ಎಂದು ಸಂದೇಶ ರವಾಣಿಸಿ ಬೇರೊಂದು ಸ್ಥಳವನ್ನು ಸೂಚಿಸಿದ್ದ. ಹೀಗೆ ಮೂರು, ನಾಲ್ಕು ಬಾರಿ ಸ್ಥಳವನ್ನು ಬದಲಾಯಿಸುತ್ತಾ ಮೆಸೇಜ್ ಮಾಡುತ್ತಿದ್ದ ಆರೋಪಿ ಕೊನೆಗೆ ಶಿರ್ಲಾಲು - ಸವಣಾಲು ಕ್ರಾಸ್ ಬಳಿ ಹಣವನ್ನು ವಾಹನದಿಂದ ಬಿಸಾಡಿ ಹೋಗುವಂತೆ ತಿಳಿಸಿದ. ಅದರಂತೆ ಶಿಕ್ಷಕಿ ಹಣದ ಕಟ್ಟನ್ನು ಬಿಸಾಡಿ ಹೋಗಿದ್ದರು. ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿ ಕಟ್ಟನ್ನು ಪಡೆದುಕೊಳ್ಳುವಷ್ಟರಲ್ಲಿ ಮೊದಲೇ ಕಾದುಕುಳಿತ್ತಿದ್ದ ಪೊಲೀಸರು ಹಿಡಿಯಲು ಯತ್ನಿಸಿದ್ದಾರೆ. ಆದರೆ ಅಚಾನಕ್ ಆಗಿ ತಪ್ಪಿಸಿಕೊಂಡಿದ್ದ ಆರೋಪಿ ಅಲ್ಲಿಂದ ಪರಾರಿಯಾಗಿದ್ದ. ಕ್ಷಿಪ್ರ ಕಾರ್ಯಾಚರಣೆಗಿಳಿದ ಪೊಲೀಸರು ತಡರಾತ್ರಿ ಆತನ ಅಣ್ಣನ ಮನೆ ಗುಂಡೇರಿ ಸಮೀಪ ದಸ್ತಗಿರಿ ಮಾಡಿ ಆತ ವಸೂಲಿ ಮಾಡಿದ್ದ 1 ಲಕ್ಷ ಹಣ ಹಾಗೂ , ಕೃತ್ಯಕ್ಕೆ ಉಪಯೋಗಿಸಿದ ಬೈಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!