ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಕಲ್ಮಂಜ,ವಿದ್ಯುತ್ ತಂತಿಗೆ ಅಲ್ಯೂಮಿನಿಯಂ ದೋಟಿ ಸ್ಪರ್ಶ: ಸೀಯಾಳ ಕೀಳಲು ಹೋದ ಕೃಷಿಕ ಸ್ಥಳದಲ್ಲೇ ಸಾವು:

ಕಲ್ಮಂಜ,ವಿದ್ಯುತ್ ತಂತಿಗೆ ಅಲ್ಯೂಮಿನಿಯಂ ದೋಟಿ ಸ್ಪರ್ಶ: ಸೀಯಾಳ ಕೀಳಲು ಹೋದ ಕೃಷಿಕ ಸ್ಥಳದಲ್ಲೇ ಸಾವು:

 

 

 

 

ಬೆಳ್ತಂಗಡಿ; ಅಲ್ಯೂಮಿನಿಯಂ ದೋಟಿ ಆಕಸ್ಮಿಕವಾಗಿ ವಿದ್ಯುತ್‌ ತಂತಿಗೆ ಸ್ಪರ್ಶಗೊಂಡು ಕಲ್ಮಂಜ ಗ್ರಾಮದ ಅಂಬಟೆ ಮನೆ ನಿವಾಸಿ, ಕೃಷಿಕರೊಬ್ಬರು ಮೃತಪಟ್ಟ ಘಟನೆ ಸಂಭವಿಸಿದೆ. ಮೃತರನ್ನು ಶಶಿಧರನ್ ನಾಯರ್ (68) ಎಂದು ಗುರುತಿಸಲಾಗಿದೆ. ಶಶಿಧರನ್ ಅವರು ಮನೆಯ ಹತ್ತಿರ ಇರುವ ತೋಟದ ತೆಂಗಿನ ಮರದಿಂದ ಸೀಯಾಳ ತೆಗೆಯಲೆಂದು ಮನೆಯಲ್ಲಿದ್ದ ಅಲ್ಯುಮಿನಿಯಂ ದೋಂಟಿಯನ್ನು ತೆಗೆದುಕೊಂಡು ಹೋಗಿದ್ದು ಹೋದ ಸ್ವಲ್ಪ ಹೊತ್ತಿನಲ್ಲಿ ಜೋರಾಗಿ ಬೊಬ್ಬೆ ಹಾಕಿದಂತೆ ಶಬ್ದ ಕೇಳಿಬಂದಿತ್ತು. ಈ ವೇಳೆ ಪತ್ನಿ ಹಾಗೂ ಈ ವೇಳೆ ಮನೆಯಲ್ಲಿದ್ದ ಆಂಟನಿ ಎಂಬವರು ಓಡಿಹೋಗಿ ನೋಡಿದಾಗ ಶಶಿಧರ‌ನ್ ಕುಸಿದು ಬಿದ್ದಿದ್ದರು. ಗಾಯಾಳುವನ್ನು ತಕ್ಷಣ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದೊಯ್ದರೂ ಅದಾಗಲೇ ಅವರು ಮೃತಪಟ್ಟಿದ್ದರು. ಈ ಬಗ್ಗೆ ಮೃತರ ಪತ್ನಿ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!