ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಉದ್ಯಮಿ ಶಶಿಧರ್ ಬಿ. ಶೆಟ್ಟಿ ಬರೋಡ ಮುಡಿಗೇರಿದ “ಸೇವಾ ಸಿರಿ” ಬಿರುದು: ಕನ್ಯಾನ ಸದಾಶಿವ ಶೆಟ್ಟಿಯವರಿಗೆ "ದಾನ ಸಿರಿ" ಬಿರುದು ಪ್ರದಾನ:ಒಡಿಯೂರು ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳಿಂದ ಗೌರವ

ಉದ್ಯಮಿ ಶಶಿಧರ್ ಬಿ. ಶೆಟ್ಟಿ ಬರೋಡ ಮುಡಿಗೇರಿದ “ಸೇವಾ ಸಿರಿ” ಬಿರುದು: ಕನ್ಯಾನ ಸದಾಶಿವ ಶೆಟ್ಟಿಯವರಿಗೆ "ದಾನ ಸಿರಿ" ಬಿರುದು ಪ್ರದಾನ:ಒಡಿಯೂರು ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳಿಂದ ಗೌರವ

ಬೆಳ್ತಂಗಡಿ: ಉದ್ಯಮಿ ಶಶಿಧರ ಬಿ. ಶೆಟ್ಟಿ ನವಶಕ್ತಿ ಗುರುವಾಯನಕೆರೆ ಅವರಿಗೆ ಒಡಿಯೂರು ಶ್ರೀಗಳ ಜನ್ಮದಿನೊತ್ಸವ ಗ್ರಾಮೋತ್ಸೋವದಲ್ಲಿ "ಸೇವಾಸಿರಿ" ಎಂಬ ಬಿರುದನ್ನು ನೀಡಿ ಗೌರವಿಸಲಾಗಿದೆ.

ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಇದರ ವತಿಯಿಂದ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ಜನ್ಮದಿನೋತ್ಸವ ಪ್ರಯುಕ್ತ ಗುರುವಂದನೆ ಸೇವಾ ಸಂಭ್ರಮದೊಂದಿಗೆ ಗ್ರಾಮೋತ್ಸವ ಆಚರಣೆಯು ಒಡಿಯೂರು ಕ್ಷೇತ್ರದಲ್ಲಿ ಆ.08ರಂದು ನಡೆಯಿತು.‌ ಈ ಸಂದರ್ಭದಲ್ಲಿ ಪೂಜ್ಯ ಸ್ವಾಮಿಜೀಯವರು ಶಶಿಧರ್ ಬಿ ಶೆಟ್ಟಿ ಬರೋಡ ಅವರನ್ನು ಸನ್ಮಾನಿಸಿ ಬಿರುದು ನೀಡಿ ಗೌರವಿಸಿದರು.

ಇದೇ ಸಂದರ್ಭದಲ್ಲಿ ಶ್ರೀ ಕನ್ಯಾನ ಸದಾಶಿವ ಶೆಟ್ಟಿಯವರಿಗೆ "ಧಾನ ಸಿರಿ" ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು. ಆಳ್ವಾಸ್ ಎಜುಕೇಶನ್ ಪೌಂಡೇಶನ್ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ , ಖ್ಯಾತ ಗಾಯಕರು ಮತ್ತು ಸಂಗೀತ ನಿರ್ದೇಶಕರಾದ ಶ್ರೀ ಶಂಕರ ಶ್ಯಾನುಬೋಗ್ ಇವರನ್ನು ಸಂಸ್ಥಾನದಿಂದ ವಿಶೇಷ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಭಾ ಕಾರ್ಯಕ್ರಮದಲ್ಲಿ ಅನುಗ್ರಹ ಸಂದೇಶವನ್ನು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ನೀಡಿದರು. ದಿವ್ಯ ಉಪಸ್ಥಿತಿ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ವಿಶೇಷ ಆಹ್ವಾನಿತರಾಗಿ ಬಂಟ್ವಾಳ ಶಾಸಕ  ರಾಜೇಶ್ ನಾಯ್ಕ್ ಯು , ಹೈಟೆಕ್ ಇಲೆಕ್ಟ್ರಿಫಿಕೇಶನ್ ಇಂಜಿಯರಿಂಗ್ ಮುಂಬೈ ಆಡಳಿತ ನಿರ್ದೇಶಕ  ರವಿನಾಥ್ ವಿ. ಶೆಟ್ಟಿ ಅಂಕ್ಲೇಶ್ವರ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಗ್ರಾಮೋತ್ಸವ ನಡೆಯಿತು.

 

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!